RNI NO. KARKAN/2006/27779|Monday, August 8, 2022
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಕಾರ್ಯಾಲಯ ಉದ್ಘಾಟನೆ

ಗೋಕಾಕ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಕಾರ್ಯಾಲಯ ಉದ್ಘಾಟನೆ 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಕಾರ್ಯಾಲಯ ಉದ್ಘಾಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :
ದಿನದಿಂದ ದಿನಕ್ಕೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಅವುಗಳನ್ನು ಪರಿಹರಿಸಲು ಹಾಗೂ ರೈತರು ಒಂದೆಡೆ ಸೇರಿ ಚರ್ಚಿಸಲು ಪ್ರತ್ಯೇಕ ಕಾರ್ಯಾಲಯದ ಅವಶ್ಯಕತೆ ಇದ್ದು ಅದನ್ನು ಒದಗಿಸಲು ಸಂಘ ಕಾರ್ಯ ತತ್ಪರವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಹೇಳಿದರು.
ಅವರು ನಗರದ ಶ್ರೀ ಲಕ್ಷ್ಮೀದೇವಿ ಮಂದಿರ ರಸ್ತೆಯಲ್ಲಿ ಪೋಲಿಸ್ ಕ್ವಾಟರ್ಸ ಎದುರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಕಾರ್ಯಾಲಯವನ್ನು ಶುಕ್ರವಾರದಂದು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ರೈತ ಸಂಘದ ಗಮನಕ್ಕೆ ತರಲು ಈ ಕಛೇರಿಗೆ ಸಂಪರ್ಕಿಸಬೇಕೆಂದು ಹೇಳಿದ ಅವರು, ರಾಜ್ಯದಲ್ಲಿ ರೈತರ ಸಮಸ್ಯೆಗಳು ವಿಪರಿತವಾಗಿದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ರೈತ ಸಮೂಹ ಇದರ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರಲ್ಲದೇ ಗೋಕಾಕ ತಾಲೂಕಾ ಅಧ್ಯಕ್ಷರನ್ನಾಗಿ ಮಂಜುನಾಥ ಪೂಜೇರಿ ಅವರನ್ನು ಆಯ್ಕೆ ಮಾಡಲಾಗಿದ್ದು ರೈತರು ಅವರನ್ನು ಸಂಪರ್ಕಿಸಬಹುದು ಎಂದು ಭೀಮಶಿ ಗದಾಡಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಂಕರ ಮದಿಹಳ್ಳಿ, ಭೀಮಶಿ ಹುಲಕುಂದ, ವೆಂಕಪ್ಪ ಕೊಪ್ಪದ, ರಾಯಪ್ಪ ಗೌಡಪ್ಪನವರ, ಅವಿನಾಶ ಖಾನಪ್ಪನವರ, ಯಲ್ಲಪ್ಪ ತಿಗಡಿ, ಪ್ರದೀಪ ಪೂಜೇರಿ, ರಮೇಶ ಗೂದಿಗೊಪ್ಪ, ಬರಮು ಖೆಮಲಾಪೂರೆ, ಹಣಮಂತ ಹುಚ್ಚೆಲ್ಲಿ, ಸಿದ್ದಪ್ಪ ಗೌಡಪ್ಪನವರ, ಬಾಳು ಮರೆಪ್ಪಗೋಳ, ಹಣಮಂತ ಅಳಗೊಂಡಿ, ಪ್ರಕಾಶ ಗಂಗಪ್ಪಗೋಳ, ಹಣಮಂತ ಚಿಪ್ಪಲಕಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: