ಗೋಕಾಕ:ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ
ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :
ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ, ಯುವ ಶಕ್ತಿಯ ಸದ್ಬಳಕೆಯಿಂದ ಭವ್ಯ ಭಾರತ ನಿರ್ಮಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಬೆಟಗೇರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಹೇಳಿದರು.
ಶುಕ್ರವಾರ ನಗರದ ಶ್ರಿ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಬಲಿಷ್ಠ ಯುವ ಶಕ್ತಿಯನ್ನು ದೇಶ ಹೊಂದಿದ್ದು, ಸ್ವಾಮಿ ವಿವೇಕಾನಂದರಂತಹ ಮಹಾನ ವ್ಯಕ್ತಿಗಳ ಆದರ್ಶಗಳ ಪ್ರೇರಣೆಯನ್ನು ನೀಡಿ, ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್ ಉಪಕರಣಗಳ ಸದುಪಯೋಗ ಪಡಿಸಿಕೊಳ್ಳಬೇಕು. ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದಿನ ದಿನಗಳಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತz.É ಪರಿಶ್ರಮವಿಲ್ಲದೇ ಫಲ ದೊರೆಯುವುದಿಲ್ಲ. ಶಿಕ್ಷಕರ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ನಿರ್ದಿಷ್ಟ ಗುರಿಯೊಂದಿಗೆ ಪ್ರಯತ್ನಶೀಲರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಪ್ರಾಚಾರ್ಯ ಎನ್.ಕೆ.ಮಿರಾಸಿ, ಉಪನ್ಯಾಸಕರಾದ ಕೆ.ಎಲ್.ಗುಂಡ್ಯಾಗೋಳ, ಎಸ್.ಎನ್.ಮುಲ್ಲಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಂಗಾ ಚಚಡಿ, ಪ್ರಿಯಾಂಕಾ ಗುಂಡ್ಯಾಗೋಳ ಇದ್ದರು.
ವಿದ್ಯಾರ್ಥಿನಿಯರಾದ ಕೀರ್ತಿ ಸಸಾಲಟ್ಟಿ ಸ್ವಾಗತಿಸಿದರು,ಗೌರಿ ಹಾಗೂ ಶ್ವೇತಾ ನಿರೂಪಿಸಿದರು. ನಿವೇದಿತಾ ಹಿರೇಮಠ ವಂದಿಸಿದರು.