ಗೋಕಾಕ:ಸಂವಿಧಾನದ ಆಶಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಪ್ರಕಾಶ ಹೊಳೆಪ್ಪಗೋಳ
ಸಂವಿಧಾನದ ಆಶಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಪ್ರಕಾಶ ಹೊಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 26 :
ದೇಶದ ಸ್ವಾತಂತ್ರವನ್ನು ಮತ್ತು ಸಂವಿಧಾನದ ಆಶಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದರು
ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ್ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ 71 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೆರಿಸಿ ಅವರು ಮಾತನಾಡಿದರು
ದೇಶದ ಬಗ್ಗೆ ಗೌರವವನ್ನು, ದೇಶಭಕ್ತಿಯನ್ನು ಬೆಳೆಸಿಕೊಂಡು ನಮ್ಮ ಸಮಾಜದ ಜನರ ಕಷ್ಟ – ನೋವುಗಳಿಗೆ ಸ್ವಂದಿಸುವ ಸಂವೇದನಾ ಶೀಲತೆಯನ್ನು ಬೆಳೆಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ನಾಳೆ ಈ ದೇಶದ ಪ್ರಜೆಗಳಾಗುವಂತವರು, ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡುವ ಮೂಲಕ ವಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಪ್ರಯತ್ನಪಟ್ಟರೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧ್ಯವಾಗುತ್ತದೆ. ಇವತ್ತು ದೇಶ ಎದುರಿಸುತ್ತಿರುವ ಬಡತನ, ನಿರುದ್ಯೋಗ, ಭೌಗೋಳಿಕ ಅಸಮಾನತೆ, ಅಂತರ ರಾಜ್ಯ ನದಿ ನೀರು ಹಂಚಿಕೆ ಸಮಸ್ಯೆ, ಭಯೋತ್ಪಾದನೆಯಂತಹ ಜಾಗತಿಕ ಪಿಡುಗುಗಳನ್ನು ನಿವಾರಿಸಲು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮದೇ ಆದ ಕೋಡುಗೆ ನೀಡಲು ಸಾಧ್ಯ . ಸಮಾಜಕ್ಕಾಗಿ ಕೆಲಸ ಮಾಡಲು, ದೇಶದ ಏಳ್ಗೆಗೆ ಗಾಗಿ ದುಡಿಯಲು ಎಲ್ಲ ವಿದ್ಯಾರ್ಥಿಗಳು ತಯಾರಾಗಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಿ.ಆರ್.ಕೊಪ್ಪ, ವಾಯ್.ಬಿ ನಾಯಿಕ , ಅಡಿವೆಪ್ಪಾ ಕಿತ್ತೂರ, ಸೋಮಶೇಖರ್ ಮಗದುಮ್ಮ , ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಅಶೋಕ ಪೂಜಾರಿ, ಎಸ್.ಎ.ಕೋತವಾಲ, ವಿವಿಧ ಇಲಾಖೆಯ ಅಧಿಕಾರಿಗಳಾದ ಡಿವಾಯ್ಎಸ್ಪಿ ಡಿ.ಟಿ ಪ್ರಭು, ಜಿ.ಬಿ ಬಳಗಾರ , ಬಸವರಾಜ ಹೆಗ್ಗನಾಯಿಕ ,ಡಾ.ರವೀಂದ್ರ ಅಂಟಿನ, , ಎ.ಬಿ.ಮಲ್ಲಬನ್ನವರ , ಎಸ್.ಕೆ ಕುಲಕರ್ಣಿ, ಎಸ್.ಪಿ.ವರಾಳೆ ಸೇರಿದಂತೆ ಅನೇಕರು ಇದ್ದರು
ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಗೌರವಿಸ ಲಾಯಿತು, ವಿವಿಧ ಶಾಲೆಗಳ ವಿದ್ಯಾರ್ಥಿ/ ವಿಧ್ಯಾರ್ಥಿನೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು . ಕಾರ್ಯ ಕ್ರಮವನ್ನು ಶಿಕ್ಷಕ ಎ.ಬಿ ಕೋಳಿ ನಿರೂಪಿಸಿ , ವಂದಿಸಿದರು
