ಗೋಕಾಕ:ಮಹೇಶಗೌಡ ಪಾಟೀಲ ಅಧ್ಯಕ್ಷರಾಗಿ, ಬಾಳಪ್ಪ ಕಬ್ಬೂರ ಉಪಾಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆ
ಮಹೇಶಗೌಡ ಪಾಟೀಲ ಅಧ್ಯಕ್ಷರಾಗಿ, ಬಾಳಪ್ಪ ಕಬ್ಬೂರ ಉಪಾಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 21 :
ಇಲ್ಲಿಗೆ ಸಮೀಪದ ಧುಪದಾಳ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಮಂಗಳವಾರದಂದು ಜರುಗಿತು.
ಚುನಾವಣೆಯಲ್ಲಿ ಗೋಕಾಕದ ಜನಪ್ರಿಯ ಶಾಸಕರಾದ ರಮೇಶ ಜಾರಕಿಹೊಳಿಯವರ ಬೆಂಬಲಿತ ಅಭ್ಯರ್ಥಿ ಬಿಜೆಪಿಯ ಯುವ ಮುಖಂಡರಾದ ಮಹೇಶಗೌಡ ಪಾಟೀಲ ಅಧ್ಯಕ್ಷರಾಗಿ, ಬಾಳಪ್ಪ ಕಬ್ಬೂರ ಉಪಾಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಿ.ಎಮ್. ಎತ್ತಿನಮನಿ, ತಾ.ಪಂ ಸದಸ್ಯರಾದ ಲಗಮನ್ನಾ ನಾಗನ್ನವರ, ನಿರ್ದೇಶಕರಾದ ಬಾಹುಬಲಿ ನಂದೇಶ್ವರ, ಭೀüಮಪ್ಪ ಮಲ್ಲಾಪೂರೆ, ರಾಮಪ್ಪ ದೇಮನ್ನವರ, ಶೀತಲ ಪರಪ್ಪನವರ, ಮದಾರಸಾಬ ಜಗದಾಳೆ, ಕಲಾವತಿ ಕುಲಕರ್ಣಿ, ಚಂಪವ್ವ ನಾಯಿಕ, ಹಣಮಂತ ಗಾಡಿವಡ್ಡರ, ನೇಮಿನಾಥ ಬೊಮ್ಮನ್ನವರ, ಉದ್ದಪ್ಪ ಬಡೇಶಗೋಳ, ಗ್ರಾ. ಪಂ. ಸದಸ್ಯರಾದ ಕಲ್ಲೋಳೆಪ್ಪ ಗಾಡಿವಡ್ಡರ, ಬಾಹುಬಲಿ ಕಡಹಟ್ಟಿ, ಸೇರಿದಂತೆ ಗ್ರಾ. ಪಂ. ಸದಸ್ಯರು, ಹಿರಿಯರು ಇದ್ದರು.