RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ :ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ

ಬೆಳಗಾವಿ :ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ 

ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ
ಬೆಳಗಾವಿ ಮೇ 31 : ಕಳೆದ ಒಂದು ವರ್ಷದಿಂದ ಕಾವು ಪಡೆದಿದ್ದ ಲಿಂಗಾಯತ ಹೋರಾಟ ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಸಿಪಾರಸ್ಸು ಮಾನ್ಯತೆ ನೀಡಬೇಕೆಂಬ ಚುನಾವಣೆಯ ದಿನಗಳು ಅಂತ್ಯದವರಿಗೆ ಸ್ಥಗಿತಗೊಂಡಿದ್ದು ಇಗ ಮತ್ತೆ ಕೇಂದ್ರ ಸರಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಲಿಂಗಾಯತರ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾದ ಮಹಾರಾಷ್ಟ್ರದ ಸೋಲ್ಲಾಪುರದ ಸಿದ್ದರಾಮೇಶ್ವರರ ಕಾರ್ಯಕ್ಷೇತ್ರದಲ್ಲಿ ಇದೇ ಜೂನ್ 3 ರಂದು ಆಯೋಜಿಸುವ ಮೂಲಕ ಹೋರಾಟದ ಕಾವು ಮತ್ತೆ ಬಿರುಸುಗೊಳಿಸಲಿದ್ದಾರೆ.
ಲಿಂಗಾಯತರು ಅಲ್ಪಸಂಖ್ಯಾತ ಧರ್ಮೀಯರು ನಾವುಗಳು ಎಂದು ಇಗಾಗಲೇ ಕರ್ನಾಟಕ ರಾಜ್ಯ ಸರಕಾರದ ನಾಗಮೋಹನದಾಸ ವರದಿ ನೀಡಿ ಕೇಂದ್ರ ಸರಕಾರಕ್ಕೆ ಸಿಪಾರಸ್ಸು ಮಾಡಿದ್ದು ಕೇಂದ್ರ ಸರಕಾರ ಇದ್ದಕ್ಕೆ ಒಪ್ಪಿಗೆ ಸೂಚಿಸಬೇಕೆಂದು ಈ ಹೋರಾಟ ಆರಂಭಿಸಿದ್ದೇವೆ ಎಂದು ಬೆಳಗಾವಿ ಜಿಲ್ಲಾ ರಾಷ್ಟ್ರೀಯ ಬಸವ ಸೇನಾ ಅದ್ಯಕ್ಷ ಶಂಕರ ಗುಡಸ ತಿಳಿಸಿದ್ದಾರೆ.
ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ನೆಲೆಸಿರುವ ಲಿಂಗಾಯತರಾದ ನಾವುಗಳು ಬಸವೇಶ್ವರರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ವೈಚಾರಿಕ ತಳಹದಿಯ ಬದುಕು ಸಾಗಿಸುತ್ತಿದ್ದೇವೆ. ಭೌಗೋಳಿಕವಾಗಿ ಹಿಂದೂಗಳಾದರೂ ಧಾರ್ಮಿಕವಾಗಿ ಹಿಂದೂ ಧರ್ಮಕ್ಕಿಂತ ವಿಭಿನ್ನ ಆಚರಣೆಹೊಂದಿದ್ದು ಏಕದೇವೊಪಾಸಕರಾಗಿದ್ದೇವೆ. ವಿಶ್ವಗುರು ಬಸವಣ್ಣನವರು ಸಂಶೋಧಿಸಿದ ಇಷ್ಟಲಿಂಗ ಆರಾಧಕರಾಗಿದ್ದೇವೆ ಆದ್ದರಿಂದ ನಾವು ಅಲ್ಪಸಂಖ್ಯಾತರಾಗಿದ್ದು ನಮ್ಮದು ಲಿಂಗಾಯತ ಸ್ವತಂತ್ರ ಧರ್ಮವೆಂದು ಸುಮಾರು 900ವರ್ಷಗಳ ಹಳೆಯ ಧರ್ಮವಾಗಿದೆ. ಹಿಂದೂ ಲಾ, ಬ್ರಿಟೀಷ ಆಕ್ಟ್, ಕೊರ್ಗೀಸ್ ಆಕ್ಟ್, ಮದ್ರಾಸ್ ಆಕ್ಟ್‍ಗಳಲ್ಲಿ ನಾವು ಪ್ರತೇಕವಾಗಿದ್ದೇವು ಎಂಬ ದಾಖಲೆಗಳಿವೆ. ಆದರೆ ಸ್ವತಂತ್ರ ಭಾರತದಲ್ಲಿ ಇಂದು ನಮ್ಮನ್ನು ಹಿಂದೂ ಧರ್ಮದ ಉಪಪಂಗಡಗಳಾಗಿ ಗುರುತಿಸಿ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದ್ದು ಇದು ನಮ್ಮ ಲಿಂಗಾಯತ ಸಮುದಾಯಕ್ಕಾದ ಬಹುದೊಡ್ಡ ಅನ್ಯಾಯವಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ 1940ರಿಂದಲೇ ಹೋರಾಟಗಳು ಆರಂಭವಾಗಿವೆ. ಇಂದಿನ ಜನಪ್ರತಿನಿದಿಗಳು ಅದರ ಬಗ್ಗೆ ವಿಶೇಷ ಕಾಳಜಿವಹಿಸಿದ್ದರಿಂದ ಲಿಂಗಾಯತ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿದೆ.
ಲಿಂಗಾಯತರು ಒಂದು ವರ್ಷದ ಹೋರಾಟದಿಂದ ಎಚ್ಚರಗೊಳ್ಳುತ್ತಿದ್ದು ಇಂದು ಕೇವಲ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 340 ಅಧಿಕ ಬಸವ ಲಿಂಗಾಯತಪರ ಸಂಘಸಂಸ್ಥೆಗಳು ಬೆಂಬಲ ಸೂಚಿಸಿವೆ. ಹಾಗೂ ರಾಷ್ಟ್ರ ಮತ್ತು ರಾಜ್ಯಮಟ್ಟದ ಸಂಘಟನೆಗಳಾದ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ರಾಷ್ಟ್ರೀಯ ಬಸವಸೇನಾ, ಬಸವ ಸಮಿತಿ, ಬಸವ ಬಳಗ ಹಾಗೂ ವಿವಿಧ ಸಂಘಟನೆಗಳು ಈ ಲಿಂಗಾಯತ ಹೋರಾಟಕ್ಕೆ ಬೆಂಬಲ ನೀಡಿದ್ದು ಪ್ರತಿಯೊಂದು ಹೋರಾಟಗಳಲ್ಲಿ ಭಾಗಿಯಾಗುತ್ತೇವೆಂದು ತಿಳಿಸಿದ್ದಾರೆ ಕೇಂದ್ರ ಸರಕಾರ ಬೇಗನೆ ಎಚ್ಚೆತುಕೊಂಡು ಲಿಂಗಾಯತ ಸ್ವತಂತ್ರ ಧರ್ಮದ ಸಿಪಾರಸ್ಸು ಮಾನ್ಯತೆ ನೀಡಬೇಕೆಂದು ಕೋರುತ್ತೇವೆ.

Related posts: