ಗೋಕಾಕ:ಭೃಷ್ಟಾಚಾರ ನಡೆಸಲು ನಗರದಲ್ಲಿ ಫುಟಪಾತ್ ಮೇಲಿನ ಬಡ ವ್ಯಾಪಾರಸ್ಥರನ್ನು ತೆರವು : ಲಖನ ಆರೋಪ
ಭೃಷ್ಟಾಚಾರ ನಡೆಸಲು ನಗರದಲ್ಲಿ ಫುಟಪಾತ್ ಮೇಲಿನ ಬಡ ವ್ಯಾಪಾರಸ್ಥರನ್ನು ತೆರವು : ಲಖನ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 18 :
ಭೃಷ್ಟಾಚಾರ ನಡೆಸಲು ನಗರದಲ್ಲಿ ಫುಟಪಾತ್ ಮೇಲಿನ ಬಡ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗುತ್ತಿದ್ದು, ಈ ಕಾಮಗಾರಿಗಾಗಿ ಶಾಸಕರ ಅಳಿಯ ರೂ.10 ಕೋಟಿ ಕಿಕ್ ಬ್ಯಾಕ್ ಪಡೆಯಲು ಪಿತೂರಿ ನಡೆಸಿದ್ದಾನೆ, ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಖಾರವಾಗಿ ಆರೋಪಿಸಿದ್ದಾರೆ.
ಬಲವಂತವಾಗಿ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗುತ್ತಿದೆ. ವ್ಯಾಪಾರಸ್ಥರು ನ್ಯಾಯಬದ್ಧವಾಗಿ ಹೋರಾಟ ನಡೆಸಿದರೆ ಬೆಂಬಲ ನೀಡುವುದಾಗಿ ಭರವಸೆ ನೀಡಿರುವ ಲಖನ್, ಫುಟಪಾತ್ ಕಾಮಗಾರಿಗಾಗಿ ರೂ.24 ಕೋಟಿ ಖಚು೯ ಮಾಡಲಾಗುತ್ತಿದ್ದು, ಈಗಾಗಲೇ ರೂ.16 ಕೋಟಿಯ ಒಂದು ಟೆಂಡರ್ ಕರೆಯಲಾಗಿದೆ, ಎಂದು ಇಂದು ತಮ್ಮ ಗೃಹ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಸ್ಟರ್ ಪ್ಲಾನ್ ಕಾಮಗಾರಿ ನಡೆದು ಮೂರು ವರ್ಷವಾದರೂ ಒಂದು ರಸ್ತೆಯನ್ನೂ ಸಹ ಮಾಡಿಲ್ಲ. ಈಗ ಟೆಂಡರ್ ಕರೆದು ವ್ಯಾಪಾರಸ್ಥರನ್ನು ತೆರುವುಗೊಳಿಸಲಾಗುತ್ತಿದೆ. ಹಠಾತ್ತನೆ ಪುಟಪಾತ್ ಮತ್ತು ಟ್ರಾಫಿಕ್ ನೆಪ ಹೇಳಿ ಪೊಲೀಸರಿಂದ ವ್ಯಾಪಾರಸ್ಥರನ್ನು ತೆರುವುಗೊಳಿಸಲಾಗುತ್ತಿದೆ ಎಂದು ಲಖನ್ ಆರೋಪಿಸಿದರು.
ನಗರಸಭೆಯ ಮತ್ತು ಇನ್ನಿತರ ಇಲಾಖೆ ಅಧಿಕಾರಿಗಳು ಶಾಸಕರ ಅಳಿಯ ಅಂಬಿರಾವ ಪಾಟೀಲ ಮಾತುಗಳನ್ನು ಕೇಳಿ ಈ ಕೆಲಸ ಮಾಡುತ್ತಿದ್ದಾರೆ. ಟೆಂಡರ್ ರದ್ದುಗೊಳಿಸಿ ಅನುದಾನವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳಬೇಕು, ಜೂನ್ ನಲ್ಲಿ ಜಾತ್ರೆಯೂ ಇದೆ. ನಗರದ 31 ವಾರ್ಡಗಳಲ್ಲಿ ಸರಿಯಾದ ರಸ್ತೆ ಚರಂಡಿಗಳು ಇಲ್ಲ. ಅದಕ್ಕಾಗಿ ಅನುದಾನವನ್ನು ಉಪಯೋಗಿಸಿಕೊಳ್ಳಲಿ ಎಂದು ಸಲಹೆ ನೀಡಿದ ಅವರು, ರೂ.10 ಕೋಟಿ ಕಿಕ್ ಬ್ಯಾಕ್ ಪಡೆಯಲು ಶಾಸಕರ ಅಳಿಯ ಪುಟಪಾಟ್ ನಿರ್ಮಿಸುವಂತೆ ಹಠ ಹಿಡಿದಿದ್ದಾನೆ ಎಂದು ಆರೋಪಿಸಿದರು.
ಕೂಡಲೇ ಟೆಂಡರ್ ಕರೆದಿದ್ದನ್ನು ರದ್ದುಮಾಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದು ಲಖನ ಜಾರಕಿಹೊಳಿ ಆಗ್ರಹಿಸಿದ್ದಾರೆ