ಗೋಕಾಕ:ಕಳೆದ 30 ವರ್ಷಗಳಿಂದ ರಮೇಶಗೆ ರಾಜಕೀಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡುತ್ತಾ ಬಂದಿದ್ದೇನೆ : ಶಾಸಕ ಸತೀಶ
ಕಳೆದ 30 ವರ್ಷಗಳಿಂದ ರಮೇಶಗೆ ರಾಜಕೀಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡುತ್ತಾ ಬಂದಿದ್ದೇನೆ : ಶಾಸಕ ಸತೀಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :
ರಾಜಕಾರಣದಲ್ಲಿ ಇಂತಹ ಘಟನೆಗಳು ಘಟಿಸಬಾರದು, ಇದು ಸಹೋದರ ಅಷ್ಟೆ ಅಲ್ಲ ಯಾರೊಂದಿಗೂ ಆಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು
ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀಗಳ ಆರ್ಶಿವಾದ ಪಡೆಯಲು ಬಂದಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು .
ಕಳೆದ 30 ವರ್ಷಗಳಿಂದಲೂ ಸಹೋದರ ರಮೇಶಗೆ ರಾಜಕೀಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡುತ್ತಾ ಬಂದಿದ್ದೇನೆ. ಅಧಿಕಾರ ಬರುತ್ತೆ, ಹೋಗುತ್ತೆ ಸಮಾಜಿಕ ಜೀವನದಲ್ಲಿ ಜನರು ಮುಖ್ಯ. ರಾಜಕೀಯದಲ್ಲಿ ಬೆಳೆದಂತೆ ವಿರೋಧಿಗಳು ಹೆಚ್ಚುತ್ತಾರೆ ಅದರ ಪರಿಜ್ಞಾನ ನಮಗೆ ಇರಬೇಕು. ನಮ್ಮ ಪ್ರತಿಯೊಂದು ನಿರ್ಧಾರ ಹಾಗೂ ಹೆಜ್ಜೆಗಳು ಅತ್ಯಂತ ಸೂಕ್ಷ್ಮವಾಗಿರಬೇಕು. ಸಹೋದರರಾಗಲಿ, ಆತ್ಮೀಯರಾಗಲಿ ಹಾಗೂ ತಾವು ನಂಬಿದವರೊಂದಿಗೆ ಸಮನ್ವಯತೆ ಸಾಧಿಸಿಬೇಕು ಸಮನ್ವಯತೆ ಕೊರತೆಯಿಂದ ಕೆಲವೊಮ್ಮೆ ಹಿನ್ನಡೆಯಾಗುವದು ಸಹಜ ಅದೆನೋ ಆದರೂ ಈಗ ಅದು ಮುಗಿದುಹೋದ ಅಧ್ಯಾಯ. ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ನಡೆಯಿಸಿ ಇದರ ಹಿಂದಿನ ಸತ್ಯವನ್ನು ಭೇದಿಸಬೇಕು ಎಂದರು
ಶಾಸಕರ ಬೆಂಬಲಿಗರು ಮಾಡುತ್ತಿರುವ ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯಾರೇ ಬೆಂಬಲಿಗರಾದರೂ ನೋವಾಗುವುದು ಸಹಜ ಆದರೆ ಪ್ರತಿಭಟನೆಗಳು ಪ್ರತಿಭಟನೆಗಳಾಬೇಕು ವಿನಹ ವಿಕೃತ ರೂಪ ಪಡೆಯಬಾರದು. ಶಾಂತ ರೀತಿಯಿಂದ ತಮ್ಮ ಅಹವಾಲನ್ನು ಸಲ್ಲಿಸಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು