RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಮಹಿಳೆಯರ ಶೌಚಾಲಯ ಕಟ್ಟಡವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಮನವಿ

ಗೋಕಾಕ:ಮಹಿಳೆಯರ ಶೌಚಾಲಯ ಕಟ್ಟಡವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಮನವಿ 

ಮಹಿಳೆಯರ ಶೌಚಾಲಯ ಕಟ್ಟಡವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜ 17 :

 

 

ಮಹಿಳೆಯರ ಶೌಚಾಲಯ ಕಟ್ಟಡವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗೋಕಾಕ ತಾಲೂಕಾ ಘಟಕದ ವತಿಯಿಂದ ಶುಕ್ರವಾರದಂದು ತಾಲೂಕಿನ ಶಿಂದಿಕುರಬೇಟ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಶಿಂದಿಕುರಬೇಟ ಗ್ರಾಮದ ಬಸ್ ನಿಲ್ದಾಣ ಹತ್ತಿರವಿರುವ ಮಹಿಳೆಯರ ಶೌಚಾಲಯದ ಕಂಪೌಂಡ ಗೋಡೆಯ ಕಟ್ಟಡ ಕೆಳಮಟ್ಟದಲ್ಲಿದ್ದು ಅದನ್ನು ಎತ್ತರಕ್ಕೆ ನಿರ್ಮಾಣ ಮಾಡಬೇಕು. ಕೆಳ ಮಟ್ಟದಲ್ಲಿರುವದರಿಂದ ಮಹಿಳೆಯರು ಶೌಚಾಲಯಕ್ಕೆ ಹೋಗುವುದಕ್ಕೆ ಹಿಂಜರಿಯುತ್ತಿದ್ದಾರೆ. ಅಲ್ಲದೇ ಕಿಡಿಗೇಡಿಗಳ ಕಾಟ ಹೆಚ್ಚಾಗಿದೆ. ಶೌಚಾಲಯಕ್ಕೆ ಹೋಗಬೇಕಾದರೆ ರಾತ್ರಿ ಸಮಯದಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತದೆ. ಗ್ರಾಮ ಪಂಚಾಯತಿಯ ಅಧಿಕಾರಿಗಳು,ಅಧ್ಯಕ್ಷರು,ಸದಸ್ಯರು ಗಮನ ಹರಿಸಿ ಆದಷ್ಟು ಬೇಗನೆ ಶೌಚಾಲಯ ಕಂಪೌಂಡ ಗೋಡೆಯ ನಿರ್ಮಾಣವನ್ನು ಎತ್ತರಕ್ಕೆ ಏರಿಸಿ ಮಹಿಳೆಯರಿಗೆ ಶೌಚಾಲಯದ ಅನುಕೂಲ ಮಾಡಿಕೊಡಬೇಕಾಗಿದೆ. ಒಂದು ವೇಳೆ ನಿರ್ಮಾಣ ಮಾಡದೇ ಇದ್ದಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ, ಉಪಾಧ್ಯಕ್ಷ ಮಾರುತಿ ಚೌಕಶಿ, ಗ್ರಾಮ ಘಟಕ ಅಧ್ಯಕ್ಷ ಭೀಮಶಿ ಬೆಳಗಲಿ, ದುರ್ಗಪ್ಪ ಬಂಡಿವಡ್ಡರ, ವಿನಾಯಕ ಬಂಡಿ, ಲಗಮಣ್ಣಾ ನಾಯಿಕ, ಮಹಾದೇವ ಜಗದಾಳಿ, ನಾರಾಯಣ ಜಡಕೀನ, ಹನಮಂತ ಅಂಕಲಿ,ಬಸು ಹುಬ್ಬಳ್ಳಿ, ಸೇರಿದಂತೆ ಪದಾಧಿಕಾರಿಗಳು ಇದ್ದರು.

Related posts: