ಬೆಳಗಾವಿ:ರಿಯಾಜ ಚೌಗಲಾ ಅವರ ಹಾಡುಗಳು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿಲಿ : ಐಬಿಬಿಎಪ್ ಅಧ್ಯಕ್ಷ ಪ್ರೇಮಚಂದ ಡೇಂಗ್ರಾ
ರಿಯಾಜ ಚೌಗಲಾ ಅವರ ಹಾಡುಗಳು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿಲಿ : ಐಬಿಬಿಎಪ್ ಅಧ್ಯಕ್ಷ ಪ್ರೇಮಚಂದ ಡೇಂಗ್ರಾ
ಬೆಳಗಾವಿ ಡಿ 15: ಗಾಯಕ ರಿಯಾಜ ಚೌಗಲಾ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದು ಐಬಿಬಿಎಫ್ ಅಧ್ಯಕ್ಷ ಪ್ರೇಮಚಂದ ಡೇಂಗ್ರಾ ಹೇಳಿದರು
ಅವರು ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ 10 ನೇ ಮಿ.ಸತೀಶ ಶುಗರ್ಸ ಕ್ಲಾಸಿಕ್ ಕಾರ್ಯಕ್ರಮದಲ್ಲಿ ಗಾಯಕ ರಿಯಾಜ ಚೌಗಲಾ ಅವರ ಮೂರನೇಯ ಅಲ್ಬಂ “ಮಿಂಚಾಗಿ ನೀನು ಬರಲು ” ಉದ್ಘಾಟಿಸಿ ಮಾತನಾಡಿದರು
ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ಪ್ರೀತಿಯ ಪಾತ್ರವಾಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿರುವ ರಿಯಾಜ ಚೌಗಲಾ ಅವರ ತಂಡದಿಂದ ಇನ್ನೂ ಹಲವಾರು ಹಾಡುಗಳು ಮೂಡಿಬಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು .

ರಿಯಾಜ ಚೌಗಲಾ ಅವರ ಮಿಂಚಾಗಿ ನೀನು ಬರಲು ಕನ್ನಡ ಅಲ್ಬಂ ನ್ನು ಬಿಡುಗಡೆ ಗೋಳಿಸುತ್ತಿರುವ ಐಬಿಬಿಎಫ್ ಅಧ್ಯಕ್ಷ ಪ್ರೇಮಚಂದ ಡೇಂಗ್ರಾ
ಈ ಸಂದರ್ಭದಲ್ಲಿ ಗಾಯಕ ರಿಯಾಜ ಚೌಗಲಾ , ಅಜಿತ್ ಸಿದ್ದಣನ್ನವರ , ಜೆ.ಡಿ.ಭಟ್ , ಸೇರಿದಂತೆ ಅನೇಕರು ಇದ್ದರು