RNI NO. KARKAN/2006/27779|Saturday, October 5, 2024
You are here: Home » breaking news » ಗೋಕಾಕ:ಗೋಕಾಕದಿಂದ ಮಡಗಾಂವ ವರೆಗೆ ಬ‌ಸ್ ಬಿಡಲು ದಲಿತ ಸಂಘರ್ಷ ಸಮಿತಿ ಮನವಿ

ಗೋಕಾಕ:ಗೋಕಾಕದಿಂದ ಮಡಗಾಂವ ವರೆಗೆ ಬ‌ಸ್ ಬಿಡಲು ದಲಿತ ಸಂಘರ್ಷ ಸಮಿತಿ ಮನವಿ 

ಗೋಕಾಕದಿಂದ ಮಡಗಾಂವ ವರೆಗೆ ಬ‌ಸ್ ಬಿಡಲು ದಲಿತ ಸಂಘರ್ಷ ಸಮಿತಿ ಮನವಿ

ಗೋಕಾಕ ಜ 11 : ಇಲ್ಲಿಯ ಬಸ್ ಘಟಕದಿಂದ ಗೋವಾದ ಮಡಗಾಂವ ವರೆಗೆ ಪ್ರತಿದಿನ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಬೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡ ಸತ್ತೆಪ್ಪ ಕರೆವಾಡಿ ಅವರ ನೇತ್ರತ್ವದಲ್ಲಿ ಬುಧವಾರದಂದು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಮಡಗಾಂವ ಹೋಗಲು ಬಸ್ ವ್ಯವಸ್ಥೆ ಇತ್ತು, ಆದರೆ ಕೆಲ ವರ್ಷಗಳಿಂದ ಬಂದ್ ಮಾಡಿರುವ ಕಾರಣದಿಂದ ಇಲ್ಲಿಂದ ಅಲ್ಲಿಗೆ ಹೋಗುವ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಬಸ್ ಆರಂಬಿಸುವ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‍ಎಸ್‍ನ ಮುಖಂಡರಾದ ಕಾಡಪ್ಪ ಮೇಸ್ತ್ರಿ, ರವಿ ಕಡಕೋಳ, ಲೋಕೇಶ ಕರೆವಾಡಿ, ರಮೇಶ ಮಾದರ ಇದ್ದರು.

Related posts: