ಗೋಕಾಕ:ಗೋಕಾಕ ನಗರದ ಸಮಗ್ರ ಅಭಿವೃದ್ಧಿಗೆ ಶಾಸಕ ರಮೇಶ ಜಾರಕಿಹೊಳಿ ಅವಿರತವಾಗಿ ಶ್ರಮಿಸುತ್ತಿದ್ದಾರೆ : ಭರಮಣ್ಣವರ

ಗೋಕಾಕ ನಗರದ ಸಮಗ್ರ ಅಭಿವೃದ್ಧಿಗೆ ಶಾಸಕ ರಮೇಶ ಜಾರಕಿಹೊಳಿ ಅವಿರತವಾಗಿ ಶ್ರಮಿಸುತ್ತಿದ್ದಾರೆ : ಭರಮಣ್ಣವರ
ಗೋಕಾಕ ಮೇ 9 : 20ವರ್ಷದಿಂದ ಗೋಕಾಕ ನಗರದ ಸಮಗ್ರ ಅಭಿವೃದ್ಧಿಗೆ ಶಾಸಕ ರಮೇಶ ಜಾರಕಿಹೊಳಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗೋಕಾಕ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಮತ್ತೊಮ್ಮೆ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕೆಂದು ನಗರಸಭೆ ಸದಸ್ಯ ಭೀಮಶಿ ಭರಮಣ್ಣವರ ಮನವಿ ಮಾಡಿದರು.
ಅವರು, ಗೋಕಾಕ ನಗರದ ವಾರ್ಡ ನಂ-22ರಲ್ಲಿ ಪಾದಯಾತ್ರೆಯ ಮೂಲಕ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚನೆ ಮಾಡಿ ಮಾತನಾಡಿದರು.
ಗೋಕಾಕ ನಗರದಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ, ಉದ್ಯಾಣವನ ಸೇರಿದಂತೆ ಅನೇಕ ಕಾಮಗಾರಿಯನ್ನು ಕೈಗೊಂಡು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ರಮೇಶ ಜಾರಕಿಹೊಳಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯ ಮತವನ್ನು ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನೀಡಿ ಆಶಿರ್ವಧಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಯುವ ಧುರೀಣ ಅಮರನಾಥ ಜಾರಕಿಹೊಳಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶಿವಕುಮಾರ ಹೆಗ್ಗಣ್ಣವರ, ಮಯೂರ ಹೆಗ್ಗಣ್ಣವರ, ಯೂನುಸ್ ನದಾಫ್, ಅಶ್ಫಕ್ ಮುಲ್ಲಾ, ಅಲ್ಲಾಭಕ್ಷ ಮಂಗಸೂಳಿ, ಸಚೀನ ಕಮಟೇಕರ, ಸತೀಶ ಮನ್ನಿಕೇರಿ, ಪವನ ಮಹಾಲಿಂಗಪೂರ, ಕಾಶೀಮ ಕಲೀಫ್, ರಿಯಾಜ ಮುಲ್ಲಾ ಸೇರಿದಂತೆ ನೂರಾರು ಜನರು ಇದ್ದರು.