RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪರಿಶಿಷ್ಟ ಜಾತಿ ಕಾಯ್ದಿಟ್ಟ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಅವಿರೋಧ ಆಯ್ಕೆ

ಗೋಕಾಕ:ಪರಿಶಿಷ್ಟ ಜಾತಿ ಕಾಯ್ದಿಟ್ಟ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಅವಿರೋಧ ಆಯ್ಕೆ 

ಪರಿಶಿಷ್ಟ ಜಾತಿ ಕಾಯ್ದಿಟ್ಟ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಅವಿರೋಧ ಆಯ್ಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 8 :

 
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಕಾಯ್ದಿಟ್ಟ ಸಾಲಗಾರರ ಮತಕ್ಷೇತ್ರದಿಂದ ಸುಭಾಸಚಂದ್ರ ಜಂಬಗಿ ಅವರು ಸೋಮವಾರ ಜ.6 ರಂದು ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ತಿಳಿಸಿದ್ದಾರೆ.
ಗ್ರಾಮದ ರಾಜಕೀಯ ಮುಖಂಡ ಸುಭಾಸಚಂದ್ರ ಲಕ್ಷ್ಮಣ ಜಂಬಗಿ ಅವರು ಸನ್ 1993, 2004, 2009, 2014 ಹಾಗೂ 2020 ನೇ ಸಾಲಿನ ಪ್ರಸಕ್ತ ಐದು ವರ್ಷದ ಅವಧಿ ಚುನಾವಣೆ ಸೇರಿ ಐದು ಸಲ ಅವಿರೂಧ ಆಯ್ಕೆ ಮೂಲಕ ಸದಸ್ಯರಾಗಿ ಆಯ್ಕೆಗೊಂಡು, ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಅವಿರೂಧ ಆಯ್ಕೆಯ ದಾಖಲೆಯ ಇತಿಹಾಸ ಬರೆದಿದ್ದಾರೆ.
ಬೆಟಗೇರಿ ಗ್ರಾಮದ ಸಹಕಾರಿ ವಲಯದಲ್ಲಿ ಅವಿರೂಧ ಆಯ್ಕೆಯ ಮೂಲಕ ಪಿಕೆಪಿಎಸ್ ಸಂಘದ ಸದಸ್ಯರಾಗಿ ಇತಿಹಾಸ ಬರೆದ ಸುಭಾಸಚಂದ್ರ ಜಂಬಗಿ ಅವರು ಸುಮಾರು 30 ವರ್ಷಗಳ ಕಾಲ ಸತತ ಸಲ್ಲಿಸುತ್ತಿರುವ ಸೇವೆ, ಸಹಾಯ, ಸಹಕಾರದ ಕಾರ್ಯ ಅವಿಸ್ಮರಣೀಯವಾಗಿದೆ. ಇಲ್ಲಿಯ ಸಹಕಾರಿ ವಲಯದಲ್ಲಿ ಸುಭಾಸಚಂದ್ರ ಜಂಬಗಿ ಅವರು ಅವಿರತವಾಗಿ ಸಲ್ಲಿಸುತ್ತಾ ಬಂದಿರುವ ಸಹಕಾರಿ ಸೇವೆ ಊರಿನ ಹಿರಿಯ ನಾಗರಿಕರ, ರಾಜಕೀಯ ಮುಖಂಡರ, ಗಣ್ಯರ, ಯುವಕರ ಮೆಚ್ಚುಗೆಗೆ ಪಾತ್ರವಾಗಿದೆ.

Related posts: