RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ತರಬೇತಿ: ಡಾ.ಜಗದೀಶ್

ಗೋಕಾಕ:ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ತರಬೇತಿ: ಡಾ.ಜಗದೀಶ್ 

ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ತರಬೇತಿ: ಡಾ.ಜಗದೀಶ್

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 23 :

 

 

ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುವ ಮೂಲ ಉದ್ದೇಶದಿಂದ ರಾಜ್ಯಾದ್ಯಂತ ನಿಪುಣ ತರಬೇತಿ ಕೇಂದ್ರಗಳನ್ನು ತೆರೆದು ಸೂಕ್ತ ತರಬೇತಿಗಳನ್ನು ಕೊಡಲಾಗುತ್ತಿದ್ದೆ ಎಂದು ಉಪ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ . ಜಗದೀಶ್ ಹೇಳಿದರು

ಸೋಮವಾರದಂದು ನಗರದ ಸಾರ್ವಜನಿಕ ಆಸ್ವತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ . ಜಿಲ್ಲಾ ತರಬೇತಿ ಕೇಂದ್ರ , ಬೆಳಗಾವಿ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಪುಣ ಕೌಶಲ್ಯ ಪ್ರಯೋಗಾಲಯ ( ಸ್ಕಿಲ್ ಲ್ಯಾಬ್ ) ತರಬೇತಿ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ರಾಜ್ಯದಲ್ಲಿ ಈಗಾಗಲೇ 9 ತರಬೇತಿ ಕೇಂದ್ರಗಳನ್ನು ತರೆಯಲಾಗಿದ್ದು ತಾಯಿ ಮತ್ತು ಶಿಶುವಿನ ಮರಣ ಪ್ರಮಾಣಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದ್ದೆ
ನಾವು ಮಾಡುವ ಕಾರ್ಯದಲ್ಲಿ ತೃಪ್ತಿ ಇರಬೇಕು ಆ ನಿಟ್ಟಿನಲ್ಲಿ ಎಲ್ಲ ವೈದ್ಯರು ಸಕ್ರೀಯವಾಗಿ ರೋಗಿಗಳನ್ನು ತಮ್ಮ ಕುಟುಂಬದವರಂತೆ ಭಾವಿಸಿ ರೋಗಿಗಳ ಸೇವೆಯನ್ನು ಮಾಡಬೇಕು. ಆರೋಗ್ಯ ಇಲಾಖೆಯು ಪ್ರಾರಂಭಿಸಿರುವ ಈ ನಿಪುಣ ತರಬೇತಿಯು ಶಿಶು ಮತ್ತು ತಾಯಿಗೆ ಅತ್ಯಂತ ಉಪಯುಕ್ತವಾಗಿದೆ ಸಾರ್ವಜನಿಕ ಆಸ್ಪತ್ರೆಯ ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂದಿಗಳಿಗೆ , ಸ್ಟಾಪ್ ನರ್ಸಗಳಿಗೆ 6 ದಿನ ಕಾರ್ಯಾಗಾರ ನಡೆಸಿ ಯಾವ ರೀತಿ ಹೆರಿಗೆ ಮಾಡುವದು , ಶಿಶುವಿನ ಆರೋಗ್ಯ ಹೇಗೆ ಕಾಪಾಡುವದು , (ಮುರ್ಚೆ ರೋಗ ) ಪೀಟ್ಸ ಬಂದರೆ ಏನು ಮಾಡುವದು ಎಂಬಿತ್ಯಾದಿಗಳ ಬಗ್ಗೆ ತರಬೇತಿ ನೀಡಿ ವೈದ್ಯಾಧಿಕಾರಿಗಳನ್ನು ಇದರಲ್ಲಿ ನಿಪುಣ ಮಾಡುವದೇ ಈ ನಿಪುಣ ತರಬೇತಿಯ ಗುರಿಯಾಗಿದ್ದು ರೋಗಿಗಳಿಗೆ ಇದು ಸಹಕಾರಿಯಾಗಲಿದೆ ತಿಂಗಳಿಗೆ 3 ತಂಡಗಳನ್ನು ಮಾಡಿ ತರಬೇತಿ ನೀಡಲಾಗುವದು ಎಲ್ಲ ವೈದ್ಯರು ಈ ತರಬೇತಿಯ ಸದುಪಯೋಗ ಪಡೆದುಕೊಂಡು ರೋಗಿಗಳಿಗೆ ಸಹಕಾರಿಯಾಗಬೇಕು ಎಂದು ಡಾ.ಜಗದೀಶ್ ಹೇಳಿದರು

ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್ ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಆರೋಗ್ಯ ಇಲಾಖೆಯ ನಿರ್ದೇಶಕ ಡಾ ಎ.ಎಂ ನರಹಟ್ಟಿ , ಜಿಪಂ ಸದಸ್ಯರುಗಳಾದ ಟಿ.ಆರ್.ಕಾಗಲ , ಮಡೆಪ್ಪ ತೋಳಿನವರ, ಶಾಮಾನಂದ ಪೂಜಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎ.ಸಿ.ಗುಂಡಾಳ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶೈಲಜಾ, ಡಾ.ಸರೋಜಾ ತಿಗಡಿ , ಡಾ ಆರ್. ಬೆನಚಿನ್ನಮರಡಿ, ಡಾ. ಬಿ.ಎಸ್.ಮದಬಾವಿ , ಮುಖ್ಯ ಆರೋಗ್ಯಾಧಿಕಾರಿ ಡಾ. ಆರ್.ಆರ್.ಅಂಟಿನ್ , ಸೋಮಶೇಖರ್ ಮಗದುಮ್ಮ ಸೇರಿದಂತೆ ಇತರರು ಇದ್ದರು

Related posts: