RNI NO. KARKAN/2006/27779|Monday, October 12, 2026
You are here: Home » breaking news » ಗೋಕಾಕ:ಅನರ್ಹರು ಮತ್ತೆ ಅನರ್ಹರಾಗುತ್ತಾರೆ : ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ ಬಾಂಬ್

ಗೋಕಾಕ:ಅನರ್ಹರು ಮತ್ತೆ ಅನರ್ಹರಾಗುತ್ತಾರೆ : ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ ಬಾಂಬ್ 

ಅನರ್ಹರು ಮತ್ತೆ ಅನರ್ಹರಾಗುತ್ತಾರೆ : ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ ಬಾಂಬ್

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 25:

 

ಅನರ್ಹ ಶಾಸಕರು ಮತ್ತೆ ಅನರ್ಹರಾಗುತ್ತಾರೆ ಎಂದು ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಬಡೆಂಪ್ಪಾ ಕಾಶಂಪೂರ ಹೊಸ ಬಾಂಬ್ ಸಿಡಿಸಿದರು

ಸೋಮವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಜಂಗಮ ಜೋಳಿಗೆ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು

ಬಿಜೆಪಿಯವರೊಂದಿಗೆ ಯಾವುದೇ ಸಂಬಂಧವಿಲ್ಲಾ ಎಂದು ಹೇಳಿ ಸುಪ್ರೀಂಕೋರ್ಟ್ ತೀರ್ಪಿನ ನಂತರ ಮನೆ ಬರುವ ಮೊದಲು ಬಿಜೆಪಿ ಪಕ್ಷಕ್ಕೆ ಸೇರಿದ ಅನರ್ಹ ಶಾಸಕರಿಗೆ ಜನತಾ ನ್ಯಾಯಾಲಯ ತಕ್ಕಪಾಠ ಕಲಿಸಲ್ಲಿದ್ದಾರೆ .
ಅನರ್ಹರಿಂದ ನನ್ನ ಕುರ್ಚಿ ಉಳಿದಿದೆ ಎಂದು ಸಿಎಂ ಹೇಳಿದರು 15 ಕ್ಷೇತ್ರಗಳಲ್ಲಿ ಪರಾಜಿತರಾಗುತ್ತಾರೆ. ‌ಈ ಚುನಾವಣೆಯನ್ನು ಜನರು ಗಂಭೀರವಾಗಿ ತಗೆದುಕೊಂಡಿದ್ಧಾರೆ ನಮಗೆ ಬಿಜೆಪಿಗೆ ಸಂಬಂಧ ವಿಲ್ಲ ಎಂದು ಹೇಳಿ ಬಿಜೆಪಿಗೆ ಸೇರಿದ್ದನ್ನು ಚುನಾವಣಾ ಆಯೋಗ ಗಮನಿಸಬೇಕು ಚುನಾವಣೆ ಗೆದ್ದ ನಂತರ ಮಂತ್ರಿ ಮಾಡುತ್ತಾರೆಂದು ಜನರಿಗೆ ಆಮಿಷ ಹಾಕುತ್ತಿದ್ದಾರೆ

ಕಾನೂನು ತಜ್ಞರೊಂದಿಗೆ ಮಾತನಾಡಿ ಬರುವ ದಿನಗಳಲ್ಲಿ ಇದರ ಬಗ್ಗೆ ಹೋರಾಟ ನಡೆಸಲಾಗುವದು ಎಂದು ಕಾಶಂಪೂರ ಹೇಳಿದರು

Related posts: