ಗೋಕಾಕ:ಬಿಜೆಪಿ ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರ ತುರ್ತು ಸಭೆ

ಬಿಜೆಪಿ ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರ ತುರ್ತು ಸಭೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 13 :
ಅನರ್ಹ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಘಟಕದ ಕಾರ್ಯಕರ್ತರು ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ ಇವರ ನೇತೃತ್ವದಲ್ಲಿ ತುರ್ತು ಸಭೆ ಸೇರಿ ಚರ್ಚೆ ನಡೆಯಿಸಿದರು .
ಬುಧವಾರದಂದು ಬಿಜೆಪಿ ಕಾರ್ಯಕರ್ತ ತವನಪ್ಪ ಬೆನ್ನಾಡಿ ಅವರ ನಿವಾಸದಲ್ಲಿ ಜರುಗಿದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ತಾಲೂಕಾ ಪ್ರಮುಖರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಶಿಧರ ದೇಮಶೆಟ್ಟಿ ಅವರು ಭ್ರಷ್ಟಾಚಾರದ ರೂವಾರಿಗಳೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಮತದಾರರು ಪ್ರಜ್ಞಾವಂತರಾಗಿದ್ದು ಅಂಥವರಿಗೆ ಉಪ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುವದರಲ್ಲಿದ್ದಾರೆ ಎಂದು ಹೇಳಿದರಲ್ಲದೆ ಈ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರನ್ನು ಸಂಪರ್ಕಿಸಿ ಮತ ಯಾಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ , ಅಮೀತ ಶಹಾ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡೆಯೂರಪ್ಪನವರ ಕೈ ಬಲಪಡಿಸಬೇಕೆಂದು ಮನವಿ ಮಾಡಿಕೊಂಡರು
ಇದೇ ವೇಳೆಯಲ್ಲಿ ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಣಯ ಹಾಗೂ ಮಾರ್ಗದರ್ಶನದಂತೆ ಗೋಕಾಕ ಕ್ಷೇತ್ರದಲ್ಲಿ ಕಾರ್ಯಮಾಡುವದಾಗಿ ಒಕ್ಕೊರಲಿನಿಂದ ತೀರ್ಮಾನ ಕೈಕೊಳ್ಳಲಾಯಿತಲ್ಲದೆ ಪಕ್ಷ ನಿರ್ಧರಿಸುವ ನಿರ್ಣಯದಂತೆ ಗೋಕಾಕ ವಿಧಾನ ಸಭಾ ಕ್ಷೇತ್ರಕ್ಕೆ ಯಾರನ್ನೇ ಅಭ್ಯರ್ಥಿ ಅಂತಾ ಘೋಷಿಸಿದರೂ ಒಮ್ಮತದಿಂದ, ಒಕ್ಕಟ್ಟಾಗಿ ಚುನಾವಣೆ ಎದುರಿಸುವ ಮೂಲಕ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಗೆಲ್ಲಿಸಿ ತರಲಾಗುವದೆಂದು ತಿಳಿಸಲಾಯಿತು .
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಲಕ್ಕಪ್ಪ ತಹಶೀಲದಾರ, ಜಗದೀಶ್ ಸದರಜೋಶಿ, ರಾಜ್ಯ ಅಲ್ಪ ಸಂಖ್ಯಾತರ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶಕೀಲ ಧಾರವಾಡಕರ, ರಾಜ್ಯ ಎಸ್ ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಸುಭಾಷ್ ಸನತಿಪ್ಪಗೋಳ, ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಜು ಹಿರೀಅಂಬಿಗೇರ, ಸಂತೋಷ ಹುಂಡೇಕರ, ಚಿದಾನಂದ ದೇಮಶೆಟ್ಟಿ, ತವನಪ್ಪ ಬೆನ್ನಾಡಿ, ವೀರೇಂದ್ರ ಎಕ್ಕೇರಿಮಠ, ನಗರ ಸಭೆ ಸದಸ್ಯರಾದ ಹಣಮಂತ ಕಾಳಮ್ಮನಗುಡಿ, ಸಮೀರ ಸುಣಧೋಳಿ, ಸಂತೋಷ ಬೆನ್ನಾಡಿ, ಬಸವರಾಜ ಹಿರೇಮಠ, ಅರ್ಜುನ ಜರತಾರಕರ, ಹಣಮಂತ ಕೊಳವಿ, ವಿವೇಕ ವಾಡಕರ, ಶಹಾನವಾಜ ಧಾರವಾಡಕರ ಮುಂತಾದವರು ಇದ್ದರು.