RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ವಿದೆ : ನೂತನ ಸಚಿವ ಸತೀಶ

ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ವಿದೆ : ನೂತನ ಸಚಿವ ಸತೀಶ 

ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ವಿದೆ : ನೂತನ ಸಚಿವ ಸತೀಶ

ಗೋಕಾಕ ಡಿ 27 : ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ತಮಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಇಂದಿಲ್ಲಿ ಹೇಳಿದರು .

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಗುರುವಾರದಂದು ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು

ರಮೇಶ ಜಾರಕಿಹೊಳಿ ಸಂರ್ಪಕಕ್ಕೆ ಸಿಕ್ಕಿಲ್ಲ ಇದರಿಂದಾಗಿ ಮಾತುಕತೆ ನಡೆದಿಲ್ಲ ಎಂದ ಅವರು ಭಿನ್ನಮತ ಶಮನಗೋಳಿಸುವ ವಿಶ್ವಾಸ ವ್ಯಕ್ತಪಡಿಸಿದರು .
ಮಹಾರಾಷ್ಟ್ರದ ಪ್ರಭಾವಿ ಸಚಿವರ ಮುಖಾಂತರ
ರಮೇಶ ಜಾರಕಿಹೊಳಿ ಬಿಜಿಪಿ ಅಧ್ಯಕ್ಷ ಅಮಿತ ಶಾ ಮುಖಾಂತರ ಸೇರುವ ಮಾತುಕತೆ ನಡೆಸುತ್ತಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ರಮೇಶ ಜಾರಕಿಹೊಳಿ ಬಿಜಿಪಿ ಸೇರುವ ವಿಷಯ ನನಗೆ ಗೊತ್ತಿಲ್ಲ ಆದಷ್ಟು ಬೇಗ ಅವರಿಗೆ ಭೇಟಿಯಾಗಿ ಭಿನ್ನಮತ ಶಮನ ಅಂತ್ಯಗೊಳಿಸಲಾಗುವದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು .

ಈ ‌ಸಂದರ್ಭದಲ್ಲಿ ಮಾಜಿ ನಗರಾಧ್ಯಕ್ಷ ಸಿದ್ದಲಿಂಗ ದಳವಾಯಿ , ಮೋಹಸೀನ ಖೋಜಾ , ಅಶೋಕ ಪಾಟೀಲ , ಶವು ಪಾಟೀಲ , ಎಸ್.ಎ.ಕೋತವಾಲ , ಎ.ಎ.ದೇಸಾಯಿ (ಅಬ್ಬಾಸ) , ಚಂದ್ರಶೇಖರ್ ಕೊಣ್ಣೂರ ರಿಯಾಜ ಚೌಗಲಾ , ವಿಶ್ವನಾಥ ಕಡಕೋಳ , ಡಾ.ಉದಯ ಆಜರೆ ,ಇಲಾಹಿ ಖೈರದಿ , ಗಿರೀಶ ಖೋತ , ಡಾ. ಅಬ್ದುಲವಹಾಬ ಜಮಾದಾರ , ವಿವೇಕ ಜತ್ತಿ , ಬಸವರಾಜ ಖಾನಪ್ಪನವರ ಸೇರಿದಂತೆ ಅನೇಕರು ಇದ್ದರು

Related posts: