RNI NO. KARKAN/2006/27779|Wednesday, August 6, 2025
You are here: Home » breaking news » ಗೋಕಾಕ:ವಾಹನ ಸವಾರರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದಿರುವದೆ ಅಫಘಾತಗಳಿಗೆ ಕಾರಣವಾಗಿದೆ : ಎಸ್.ಪಿ ನಿಂಬರಗಿ

ಗೋಕಾಕ:ವಾಹನ ಸವಾರರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದಿರುವದೆ ಅಫಘಾತಗಳಿಗೆ ಕಾರಣವಾಗಿದೆ : ಎಸ್.ಪಿ ನಿಂಬರಗಿ 

ವಾಹನ ಸವಾರರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದಿರುವದೆ ಅಫಘಾತಗಳಿಗೆ ಕಾರಣವಾಗಿದೆ : ಎಸ್.ಪಿ ನಿಂಬರಗಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 5 :

 

ವಾಹನ ಸವಾರರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದಿರುವದೆ ಅಫಘಾತಗಳಿಗೆ ಕಾರಣವಾಗಿದೆ. ವಾಹನ ಸವಾರರು ಸುರಕ್ಷಿತ ಚಾಲನೆ ಮಾಡುವಂತೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು

ಮಂಗಳವಾರದಂದು ಬೆಳಗಾವಿ ಜಿಲ್ಲಾ ಪೊಲೀಸ ಇಲಾಖೆ, ಉಪ ವಿಭಾಗ ಗೋಕಾಕ , ಗೋಕಾಕ ವೃತ್ತ ಹಾಗೂ ಶಹರ ಪೊಲೀಸ ಠಾಣೆ ಮತ್ತು ಸಹಾಯಕ ಸಾರಿಗೆ ಇಲಾಖೆ , ಇನ್ಸೂರನ್ಸ ಕಂಪನಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಕೊಂಡ ಸಂಚಾರಿ ಸುರಕ್ಷತಾ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

ಅಪಘಾತಗಳಲ್ಲಿ ಕರ್ನಾಟಕ ರಾಜ್ಯ ಎರಡನೇಯ ಸ್ಥಾನದಲ್ಲಿದ್ದು, ಸವಾರರು ವಾಹನ ಪರವಾಣಿಗೆ ಪತ್ರ, ವಿಮಾ ಹಾಗೂ ಹೆಲ್ಮೆಟ್ ನ್ನು ಕಡ್ಡಾಯವಾಗಿ ಧರಿಸಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಇಂದಿನ ಯುವಕರು ಮೊಬೈಲ್ ಮೇಲೆ ತೊರಿಸುವ ಆಸಕ್ತಿಯನ್ನು ವಾಹನಗಳ ಮೇಲೆ ತೊರಿಸಿ ಜೀವ ಉಳಿಸಿಕೋಳ್ಳಿ 18 ವರ್ಷಕ್ಕಿಂತ ಒಳಗಿನ ಮಕ್ಕಳು ವಾಹನ ಚಾಲನೆ ಮಾಡಿದರೆ 25 ಸಾವಿರ ದಂಡ ಮತ್ತು ಪಾಲಕರಿಗೆ 3 ವರ್ಷ ಶಿಕ್ಷೆಯಾಗುವದು ಜನತೆಗೆ ಅರಿವು ಮುಡಿಸುವ ಉದ್ದೇಶದಿಂದಲೇ ಈ ಜನ ಸ್ನೇಹಿ ಕಾರ್ಯಕ್ರಮವನ್ನು ಆಯೋಜಿಸಿದ್ದು , ಜನರು ಜಾಗೃತರಾಗಿ ಸರಕಾರದ ನಿಯಮಗಳನ್ನು ಪಾಲಿಸಿ ಸುರಕ್ಷಿತ ವಾಹನ ಚಾಲನೆ ಮಾಡುವಂತೆ ಕರೆ ನೀಡಿದ ಅವರು ಈ ಮೇಳದಲ್ಲಿ ಸೇರಿದ ಜನಸ್ತೋಮವನ್ನು ನೋಡಿ ಜನತೆ ಜಾಗೃತರಾಗುತ್ತಿದ್ದು, ಅಫಘಾತಗಳು ಕಡಿಮೆಯಾಗುವ ವಿಶ್ವಾಸವನ್ನು ವ್ಯಕ್ತ ಪಡಿಸಿ ಈ ಮೇಳದ ಯಶ್ವಸಿಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಹಾಗೂ ಜನತೆಗೂ ಧನ್ಯವಾದಗಳು ಹೇಳಿದರು .

ಇದೇ ಸಂದರ್ಭದಲ್ಲಿ ವಾಹನ ಸವಾರರಿಗೆ ಚಾಲನಾ ಪತ್ರ ,ವಿಮಾ ಪಾಲಸಿ ಪತ್ರ , ಹೆಲ್ಮೆಟ್ ಗಳನ್ನು ವಿತರಿಸಲಾಯಿತು

ವೇದಿಕೆಯ ಮೇಲೆ ಗೋಕಾಕ ಡಿಎಸಪಿ ಪ್ರಭು ಡಿ.ಟಿ ಸಹಾಯಕ ಸಾರಿಗೆ ಇಲಾಖೆಯ ಅಧಿಕಾರಿ ಶ್ರೀಮತಿ ಹೇಮಾವತಿ ಟಿ.ಜಿ , ಆರ್.ಟಿ.ಒ ಎಂ.ಬಿ.ಪಾಟೀಲ ಸಿಪಿಐಗಳಾದ ಶ್ರೀಧರ ಸತಾರೆ , ವೆಂಕಟೇಶ ಮುರನಾಳ ಇದ್ದರು

ಪಿ ಎಸ್ ಐ ಗುರುನಾಥ ಚವ್ಹಣ ಸ್ವಾಗತಿಸಿದರು . ಕಾರ್ಯಕ್ರಮವನ್ನು ಸೋಮಶೇಖರ್ ಮಗದುಮ್ಮ ನಿರೂಪಿಸಿ ವಂದಿಸಿದರು

Related posts: