ಗೋಕಾಕ:ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪದ್ದತಿಗಳು ಮಹತ್ವದ ಪಾತ್ರ ವಹಿಸಿವೆ : ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ
ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪದ್ದತಿಗಳು ಮಹತ್ವದ ಪಾತ್ರ ವಹಿಸಿವೆ : ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ
ಗೋಕಾಕ ಜು 25: ದಕ್ಷ ಆಡಳಿತ ಮತ್ತು ತೆರಿಗೆ ಪದ್ದತಿಗಳು ರಾಷ್ಟ್ರದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶ್ರೀ ಕೃಷ್ಣದೇವರಾಯನ ಕಾಲದಲ್ಲೂ ತೆರಿಗೆ ಪದ್ದತಿ ಇತ್ತು. ಕೌಟಿಲ್ಯ ಅರ್ಥಶಾಸ್ತ್ರ ತೆರಿಗೆ ಪದ್ಧತಿಗೆ ಮಾದರಿಯಾಗಿತ್ತು ಎಂದು ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ ಹೇಳಿದರು.
ಅವರು ಸೋಮವಾರದಂದು ನಗರದ ಆದಾಯ ತೆರಿಗೆ ಇಲಾಖೆ ಕಾರ್ಯಾಲಯದಲ್ಲಿ ಆದಾಯ ತೆರಿಗೆ 157ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ಭಾರತ ನಿರ್ಮಾಣದಲ್ಲಿ ತೆರಿಗೆಯ ಪಾತ್ರ ಎಂಬ ವಿಷಯಾಧಾರಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಆದಾಯ ತೆರಿಗೆ ಇಲಾಖೆಯ ಪರವಾಗಿ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ಹಾಗೂ ಎಲ್ಲ ಶಾಲಾ ಮಕ್ಕಳಿಗೆ ನೋಟ್‍ಬುಕ್, ಪೆನ್ ಮತ್ತು ಪೆನ್ಸಿಲ್ ವಿತರಿಸಲಾಯಿತು.
ಅತಿಥಿಗಳಾಗಿ ವರ್ತಕರಾದ ಪ್ರವೀಣ ಶಹಾ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಪಿ.ಎಚ್. ಕೌಜಲಗಿ ಆಗಮಿಸಿದ್ದರು.
ಗೋಕಾಕ ವಲಯದ ಆದಾಯ ತೆರಿಗೆ ಅಧಿಕಾರಿ ಈಶ್ವರ ಅಂಗಡಿ ಅತಿಥಿಗಳನ್ನು ಸ್ವಾಗತಿಸಿದರು. ಕರಸಹಾಯಕ ಸಚಿನ್‍ಕುಮಾರ ಪ್ರಾಸ್ತಾವಿಕವಾಗಿ ತೆರಿಗೆಯಿಂದ ರಾಷ್ಟ್ರನಿರ್ಮಾಣದ ಬಗ್ಗೆ ಮಾತನಾಡಿದರು.
ನಗರದ ಖ್ಯಾತ ಚಾರ್ಟರ್ಡ ಅಕೌಂಟಂಟ ಸುರೇಶ ಸೊಲ್ಲಾಪೂರಮಠ, ಸೈದಪ್ಪ ಗದಾಡಿ, ಪಿ.ಸಿ.ಬಾಫನಾ, ಸತೀಶ ನಾಡಗೌಡ, ಶ್ರೀಕಾಂತ ಗಾಡವಿ, ಸರಿತಾ ಪರಮಾರ, ತೆರಿಗೆ ಸಲಹೆಗಾರರಾದ ಎಂ.ಕೆ. ಮೂಡಲಗಿ, ಆನಂದ ಬೆಳಗಲಿ, ತವನಪ್ಪಾ ಉಂದ್ರಿ, ಶ್ರೀಧರ ಬನ್ನೂರ, ಶ್ರೀಕಾಂತ ಪಟ್ಟಣಶೆಟ್ಟಿ, ಬಾಬು ಶೆಟ್ಟಿ, ಮನೋಹರ ವಾಲಿ ಮುಂತಾದವರು ಇದ್ದರು.