RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಸ್ವಚ್ಛ ಮೇವ ಜಯತೇ ಬೀದಿ ನಾಟಕ ಪ್ರದರ್ಶನ

ಘಟಪ್ರಭಾ:ಸ್ವಚ್ಛ ಮೇವ ಜಯತೇ ಬೀದಿ ನಾಟಕ ಪ್ರದರ್ಶನ 

ಸ್ವಚ್ಛ ಮೇವ ಜಯತೇ ಬೀದಿ ನಾಟಕ ಪ್ರದರ್ಶನ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಘಟಪ್ರಭಾ ಅ 4 :

 

 
ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಗ್ರಾಮ ಪಂಚಾಯತ ಶಿಂದಿಕುರಬೇಟ, ಜಿ.ಪಂ ಬೆಳಗಾವಿ, ಡಾ: ಬಿ.ಆರ್.ಅಂಬೇಡಕರ ಜಾನಪದ ಕಲಾ ಪೋಷಕ ಸಂಘ ಚಿಂಚಲಿ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಮೇವ ಜಯತೇ ಬೀದಿ ನಾಟಕ ಪ್ರದರ್ಶನ ಜರುಗಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗ್ರಾ.ಪಂ ಪಿಡಿಓ ಸಾಯೀಶ್ವರಿ ಮೆಣಸಿನಕಾಯಿ ಅವರು ಗ್ರಾಮವು ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಗ್ರಾಮವು ಸುಂದರ, ಸ್ವಚ್ಛವಾಗಿ ಕಾಣಲು ಪ್ರತಿಯೊಬ್ಬ ಗ್ರಾಮಸ್ಥರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು. ರೋಗ ಮುಕ್ತ ಗ್ರಾಮವಾಗಿಸಲು ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಡಿಓ ಸಾಯೀಶ್ವರಿ ಮೆಣಸಿನಕಾಯಿ, ಗ್ರಾ.ಪಂ ಲೆಕ್ಕಾಧಿಕಾರಿ ವಿಠ್ಠಲ ಕುಳ್ಳೂರ, ಗುಮಾಸ್ತ ಆನಂದ ಗುಡಕೇತ್ರ, ಮೋಹನ ಭೂಶ್ಯಾಗೋಳ, ಜ್ಯೋತಿ ಬಡ್ಡಿ, ಕಲಾವಿದರಾದ ಮಿಲಿಂದ ಸಂಗಣ್ಣವರ, ಅಜೀತ ಸಂಗಣ್ಣವರ, ನಾರಾಯಣ ದೇಶಪಾಂಡೆ, ಚೇತನ ಕಾಂಬಳೆ, ಪರುಶರಾಮ ಶಿಕ್ಕಲಗಾರ, ಯಮನವ್ವ ಜೋಕಾನಟ್ಟಿ, ಭಾರತಿ ಜೋಕಾನಟ್ಟಿ ಸೇರಿದಂತೆ ಇತರರು ಇದ್ದರು.

Related posts: