ಗೋಕಾಕ:ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣ ದೋಚಿ ಕಳ್ಳ ಫರಾರಿ

ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣ ದೋಚಿ ಕಳ್ಳ ಫರಾರಿ
ಗೋಕಾಕ ಜೂ 21 : ನಗರದ ಬ್ಯಾಳಿ ಕಾಟ ಬಳಿ, ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ರೂ. ಹಣವನ್ನು ಕಳ್ಳನೊಬ್ಬ ಕದ್ದೊಯ್ದ ಘಟನೆ ನಡೆದಿದೆ.
ಭೀಮಪ್ಪ ಗೋಸಬಾಳ ಎಂಬುವವರು ಕೋರ್ಟ್ ಸರ್ಕಲ್ (ಬಸವೇಶ್ವರ ಸರ್ಕಲ್) ನಲ್ಲಿರುವ ಕೆನರಾ ಬ್ಯಾಂಕ್‌ನಿಂದ 2 ಲಕ್ಷ ರೂ. ಹಣವನ್ನು ತೆಗೆದುಕೊಂಡು ಮೋಟಾರ್ ಸೈಕಲ್‌ನಲ್ಲಿ ಇಟ್ಟಿದ್ದರು.
ನಂತರ ಮುಂದೆ ಹೋದ ಬಳಿಕ ಭೀಮಪ್ಪ ನೀರು ಕುಡಿಯುವ ವೇಳೆ ಬೈಕ್‌ನಲ್ಲಿ ಇಟ್ಟಿದ್ದ 2 ಲಕ್ಷ ನಗದನ್ನು ಯಾರೋ ದುಷ್ಕರ್ಮಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.
ಈ ಸಂಬಂಧ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದಾರೆ.