RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ಮಹಿಳೆಯೋರ್ವಳು ತನ್ನ ಇಬ್ಬರ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ : ಗೋಕಾದಲ್ಲಿ ಘಟನೆ

ಗೋಕಾಕ:ಮಹಿಳೆಯೋರ್ವಳು ತನ್ನ ಇಬ್ಬರ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ : ಗೋಕಾದಲ್ಲಿ ಘಟನೆ 

ಸಾಂದರ್ಭಿಕ ಚಿತ್ರ

ಮಹಿಳೆಯೋರ್ವಳು ತನ್ನ ಇಬ್ಬರ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ : ಗೋಕಾದಲ್ಲಿ ಘಟನೆ

 

 
ನಮ್ಮ ಬೆಳಗಾವಿ ಇ- ವಾರ್ತೆ , ಗೋಕಾಕ ಸೆ 23:

 

 
ಮಹಿಳೆಯೋರ್ವಳು ತನ್ನ ಇಬ್ಬರ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ನಗರದಲ್ಲಿ ಜರುಗಿದೆ

ಗಂಡ ಹೋಟೆಲ್ ಕೆಲಸಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನಗರದ ಮೋಮಿನ ಗಲ್ಲಿ ಲಕ್ಕ್ಮೀ ನಿಂಗಪ್ಪ ಯಮಕನಮರಡಿ (40) ಎಂಬ ಮಹಿಳೆಯು ಹರ್ಷಿತಾ (8) ಹಾಗೂ ಸರ್ಮಥ (6) ಎಂಬ ತನ್ನ ಮಕ್ಕಳಿಗೆ ವಿಷ ಉನ್ನಿಸಿ ತಾನು ವಿಷ ಸೇವಿಸಿ ಮೃತಪಟ್ಟಿದ್ದಾಳೆ
ಮಕ್ಕಳು ಇಲ್ಲಿಯ ಶ್ರೀ ಪಾಯ ಸಾಗರ ಶಾಲೆಯಲ್ಲಿ ಒದುತ್ತಿದ್ದರು ಮಕ್ಕಳು ಶಾಲೆಯನ್ನು ಮುಗಿಸಿಕೊಂಡು ಬಂದ ನಂತರ ಸಂಜೆ 6 ಘಂಟೆಯ ಸುಮಾರಿಗೆ ಮಕ್ಕಳಿಗೆ ವಿಷ ಉನ್ನಿಸಿ ತಾನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿಯೆ ಇದ್ದು ಸಾವನ್ನಪ್ಪಿರುವದು ಎಂತವರ ಮನವನ್ನು ಕಲುಕುವಂತಿತ್ತು . ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿರುವದಿಲ್ಲ ಂ ಘಟನೆಯು ಗೋಕಾಕ ಶರಹ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ . ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಯನ್ನು ಕೈಗೊಂಡಿದ್ದಾರೆ

Related posts: