ಗೋಕಾಕ:ದೇಶದ ಸ್ವಾತಂತ್ರಕ್ಕಾಗಿ ತನು-ಮನ-ಧನದಿಂದ ಹೋರಾಡಿದ ತ್ಯಾಗಿಗಳ ಜೀವನ ನಮಗೆಲ್ಲ ಆದರ್ಶವಾಗಿದೆ ; ಪ್ರಕಾಶ ಹೊಳೆಪ್ಪಗೋಳ

ದೇಶದ ಸ್ವಾತಂತ್ರಕ್ಕಾಗಿ ತನು-ಮನ-ಧನದಿಂದ ಹೋರಾಡಿದ ತ್ಯಾಗಿಗಳ ಜೀವನ ನಮಗೆಲ್ಲ ಆದರ್ಶವಾಗಿದೆ ; ಪ್ರಕಾಶ ಹೊಳೆಪ್ಪಗೋಳ
ಜೀವದ ಹಂಗೂ ತೊರೆದು ಪ್ರಾಣ ರಕ್ಷಿಸಿದ ಎಕ್ಸಪ್ಲೋರ್ ದಿ ಔಡ್ಡೋರ ತಂಡವನ್ನು ತಾಲೂಕಾಡಳಿತದ ವತಿಯಿಂದ ಸತ್ಕಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 15 :
ದೇಶದ ಸ್ವಾತಂತ್ರಕ್ಕಾಗಿ ತನು-ಮನ-ಧನದಿಂದ ಹೋರಾಡಿದ ತ್ಯಾಗಿಗಳ ಜೀವನ ನಮಗೆಲ್ಲ ಆದರ್ಶವಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಗುರುವಾರದಂದು ನಗರದ ವಾಲ್ಮಿಕಿ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ 73ನೇ ಸ್ವಾತಂತೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಸ್ವತಂತ್ರ ದೊರೆತು 73 ವರ್ಷಗಳಲ್ಲಿ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದರು, ಅನಿರೀಕ್ಷಿತವಾಗಿ ಬರುವ ಪ್ರಕೃತಿ ವಿಕೋಪಗಳನ್ನು ಸಮಪರ್ಕವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಅನಿರೀಕ್ಷಿತ ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳು ಬಹಳ ತೊಂದರೆಗೀಡಾಗಿದೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವುನ್ನು ನೀಡಿದ ಸರ್ಕಾರಿ ಇಲಾಖೆಗಳು ಸಂಘ-ಸಂಸ್ಥೆಗಳು ಹಾಗೂ ಮಹನೀಯರಿಗೆ ಅಭಿನಂದನೆ ಸಲ್ಲಿಸಿದರಲ್ಲದೇ ನೆರೆ ಹಾವಳಿಯಿಂದ ಜೀವ ಕಳೆದುಕೊಂಡವರಿಗೆ ಶೃದ್ಧಾಂಜಲಿ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಿದ ಇಲ್ಲಿಯ ಅಯ್ಯುಬ ಖಾನ ನೇತ್ರತ್ವದ ಎಕ್ಸಪ್ಲೋರ್ ದಿ ಔಡ್ಡೋರ ತಂಡ ಹಾಗೂ ಎಸ್‍ಡಿಆರ್‍ಎಫ್ ತಂಡ ಪೋಲಿಸ ಇಲಾಖೆಯ ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ. ಸಿಪಿಐ ಶ್ರೀಧರ ಸಾತಾರೆ, ಎಎಸ್‍ಆಯ್ ಆರ್.ವಾಯ್.ತಳವಾರ ಅವರನ್ನು ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಯೋಧ ಜಿ.ಎಲ್.ಗುಣಕಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ತಾ.ಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ ಮುಖಂಡರಾದ ಅಶೋಕ ಪೂಜಾರಿ. ಸೋಮಶೇಖರ ಮಗದುಮ್ಮ, ತಾಪಂ ಇಓ ಬಸವರಾಜ ಹೆಗ್ಗನಾಯಕ, ನಗರ ಸಭೆ ಸದಸ್ಯ ಎಸ್.ಎ, ಕೋತವಾಲ. ಪೌರಾಯುಕ್ತ ಶಿವಾನಂದ ಹಿರೇಮಠ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಾಲೂಕಾ ಕಂದಾಯ ಇಲಾಖೆಯ ಅಧಿಕಾರಿಗಳು. ನಗರ ಸಭೆಯ ಅಧಿಕಾರಿಗಳು. ಸರ್ಕಾರಿಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಎ. ಜಿ. ಕೋಳಿ ಸ್ವಾಗತಿಸಿ, ವಂದಿಸಿದರು.