ಘಟಪ್ರಭಾ:ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿಧಾರಾಕಾರ ಮಳೆ

ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿಧಾರಾಕಾರ ಮಳೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 23 :
ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರವಿವಾರ ಸಂಜೆ ಧಾರಾಕಾರ ಮಳೆ ಸುರಿದಿದೆ.
ಘಟಪ್ರಭಾ, ಧುಪದಾಳ ಶಿಂದಿಕುರಬೇಟ, ಪಾಮಲದಿನ್ನಿ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಸುಮಾರು ಎರಡು ಘಂಟೆಕಾಲ ಬಿಡುವಿಲ್ಲದೆ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನ ಪರದಾಡುವಂತಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಚಂಡಿಗಳು ಬ್ಲಾಕ್ ಆಗಿ ಕೊಳಚಿ ನೀರು ಮನೆಗಳಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ.
ಸಂತೆÉಯಲ್ಲಿ ಪರದಾಡಿದ ವ್ಯಾಪಾರಸ್ಥರು: ರವಿವಾರ ಘಟಪ್ರಭಾದಲ್ಲಿ ವಾರದ ಸಂತೆ ದಿನವಾಗಿದ್ದರಿಂದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹೆಚ್ಚಾಗಿ ರಸ್ತೆ ಮೇಲೆ ಹಚ್ಚಿರುತ್ತಾರೆ. ಸಂಜೆ ಎರಡು ಘಂಟೆಕಾಲ ಸುರಿದ ಧಾರಾಕಾರ ಮಳೆಯಿಂದ ವ್ಯಾಪಾರಸ್ತರು ತಮ್ಮ ಅಂಗಳನ್ನು ರಸ್ತೆಯ ಮೇಲೆಯೇ ಬಿಟ್ಟು ಮಳೆಯ ನಿಲ್ಲುವುದಗೋಸ್ಕರ ಕಾಯಬೇಕಾಯಿತು. ಮಳೆ ನೀರಿನ ರಭಸಕ್ಕೆ ರಸ್ತೆಯ ಮೇಲೆ ಹಚ್ಚಲಾದ ಅಂಗಡಿಗಳನ್ನು ಉಳಿಸಿಕೊಳ್ಳಲು ವ್ಯಾಪಾರಸ್ತರು ಹರಸಾಹದ ಪಡಬೇಕಾಯಿತು.