RNI NO. KARKAN/2006/27779|Tuesday, February 17, 2026
You are here: Home » breaking news » ಗೋಕಾಕ:ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವದಾಗಿದ್ದೆ : ಡಾ|| ಮಹಾಂತೇಶ ಕಡಾಡಿ

ಗೋಕಾಕ:ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವದಾಗಿದ್ದೆ : ಡಾ|| ಮಹಾಂತೇಶ ಕಡಾಡಿ 

ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವದಾಗಿದ್ದೆ : ಡಾ|| ಮಹಾಂತೇಶ ಕಡಾಡಿ

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಮೇ 14 :

 
ಅಂತರಾಷ್ಟ್ರೀಯ ಶುಶ್ರೂಕಿಯರ(ನರ್ಸಿಂಗ್) ದಿನಾಚರಣೆಯ ನಿಮಿತ್ಯ ಇಲ್ಲಿಯ ತುಕ್ಕಾರ ನರ್ಸಿಂಗ್ ಸ್ಕೂಲ್‍ನವರ ಹಮ್ಮಿಕೊಂಡ ಜಾಥಾಕ್ಕೆ ಸಂಸ್ಥೆಯ ಅಧ್ಯಕ್ಷ ಡಾ|| ಮಹಾಂತೇಶ ಕಡಾಡಿ ಅವರು ಮಂಗಳವಾರದಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವದಾಗಿದ್ದು, ರೋಗಿಗಳಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬಿ, ನಿಸ್ವಾರ್ಥದಿಂದ ಅವರ ಆರೈಕೆ ಮಾಡುವುದರೊಂದಿಗೆ ಅವರು ಬೇಗ ಗುಣಮುಖರಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೆ ಪಾತ್ರ ಶುಶ್ರೂಕಿಯರದ್ದು ಆಗಿರುತ್ತದೆ ಅವರ ಸೇವೆಯನ್ನು ನಾವೆಲ್ಲರೂ ಗುರುತಿಸಿ ಪ್ರೋತ್ಸಾಹಿಸೋಣ ಎಂದು ಹೇಳಿದರು.
ಈ ಜಾಥಾದಲ್ಲಿ ಪ್ರಾಚಾರ್ಯ ವಿಜಯ ಮಲಕನ್ನವರ, ಮಹಾದೇವ ಬಂಡ್ರೋಳ್ಳಿ, ಸಾಗರ ಖೆಮಲಾಪೂರ ಸೇರಿದಂತೆ ಅನೇಕರು ಇದ್ದರು.

Related posts: