RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಬಸವಲಿಂಗ ಪ್ರಭು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ

ಗೋಕಾಕ:ಬಸವಲಿಂಗ ಪ್ರಭು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ 

ಬಸವಲಿಂಗ ಪ್ರಭು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 6 :

 

ಗ್ರಾಮದ ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಬಸವಲಿಂಗ ಪ್ರಭು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಇತ್ತೀಚೆಗೆ ನಡೆಯಿತು.
ಕಡಕೋಳದ ತ್ರಿವಿಧ ದಾಸೋಹಮೂರ್ತಿ ಸಿದ್ರಾಯಜ್ಜನವರು ದಿವ್ಯಸಾನಿಧ್ಯ, ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದು ವಡೇರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕøತಿಕ ಮನರಂಜನೆಯ ಕಾರ್ಯಕ್ರಮಗಳು ನಡೆದವು. ಸಂತ, ಶರಣರ ಹಾಗೂ ಮಹಾನ್ ಪುರುಷರ ರೂಪಕದಲ್ಲಿ ಶಾಲೆಯ ಮುಗ್ಧ ಮಕ್ಕಳ ಎಲ್ಲರ ಗಮನ ಸೆಳೆದರು.
ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಬಸವರಾಜ ಕುರಬೇಟ, ಹನುಮಂತ ವಡೇರ, ಮಹಾದೇವ ಹೊರಟ್ಟಿ, ಮಾರುತಿ ಚಂದರಗಿ, ರಮೇಶ ಹಾಲಣ್ಣವರ, ಮುಖ್ಯ ಶಿಕ್ಷಕಿ ಆರ್.ಎಸ್.ಪೊಲೀಸ್‍ನವರ, ಸ್ಥಳೀಯ ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ, ಶಿಕ್ಷಣ ಪ್ರೇಮಿಗಳು, ಇತರರು ಇದ್ದರು.
ಸಿ.ಜಿ.ಹೂಗಾರ ಸ್ವಾಗತಿಸಿದರು. ವಿರುಪಾಕ್ಷಯ್ಯ ಮಠಪತಿ ನಿರೂಪಿಸಿದರು. ಜಿ.ಎಚ್.ಚಿಗದಿನ್ನಿ ವಂದಿಸಿದರು.

Related posts: