RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:5ನೇ ದಿನಕ್ಕೆ ಮುಂದುವರೆದ ಅರಭಾಂವಿ ಪಟ್ಟಣದ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರ ಧರಣಿ

ಗೋಕಾಕ:5ನೇ ದಿನಕ್ಕೆ ಮುಂದುವರೆದ ಅರಭಾಂವಿ ಪಟ್ಟಣದ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರ ಧರಣಿ 

5ನೇ ದಿನಕ್ಕೆ ಮುಂದುವರೆದ ಅರಭಾಂವಿ ಪಟ್ಟಣದ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರ ಧರಣಿ

ಗೋಕಾಕ ಡಿ 25 : ತಾಲೂಕಿನ ಅರಭಾಂವಿ ಪಟ್ಟಣದ ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಮುಂದುವರೆದಿದೆ.
ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವದರಂದ ಸ್ವಚ್ಛತೆ, ನೀರು ಸರಬುರಾಜು ಸೇರಿದಂತೆ ಹಲವು ಕಾರ್ಯಗಳು ಸ್ಥಗಿತಗೊಂಡಿವೆ.
ಪ್ರತಿಭಟನಾಕಾರರು ಕಳೆದ 4 ದಿನಗಳಿಂದ ಧರಣಿ ಸ್ಥಳದಲ್ಲಿಯೇ ಭೋಜನ ತಯಾರಿಸಿ ಊಟ ಮಾಡುವದರ ಜೊತೆಗೆ ಅಲ್ಲಿಯೇ ಮಲಗುತ್ತಿದ್ದಾರೆ.
ಮಹಾದೇವ ಮಾದರ, ಶಾನೂರ ಹರಿಜನ, ರಾಜು ಮಾದರ, ನಿಂಗಪ್ಪ ಕಡ್ಡಿ, ಸುರೇಶ ಹಟ್ಟಿ, ಇಂದ್ರವ್ವ ಹರಿಜನ, ಮೀನಾಕ್ಷಿ ಹಲಗಿ, ಸುಶೀಲವ್ವ ಹರಿಜನ, ಮಹಾದೇವಿ ಹರಿಜನ, ರಮೇಶ ಮೆಳವಂಕಿ, ಲಕ್ಷ್ಮಣ ಮೇತ್ರಿ, ಲಕ್ಷ್ಮವ್ವ ಮಾದರ, ಲಕ್ಷ್ಮವ್ವ ಹರಿಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Related posts: