RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ

ಗೋಕಾಕ:ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ 

ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ


ಬೆಟಗೇರಿ ಡಿ 11 : ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಕಟ್ಟಡದ ಹಿಂದಿನಿಂದ ಸ್ಥಳೀಯ ಅಶ್ವಾರೂಢ ಬಸವೇಶ್ವರ ವೃತ್ತದ ತನಕ ಸನ್ 2018-19 ನೇ ಸಾಲಿನ ಎಮ್‍ಜಿಎನ್‍ಆರ್‍ಜಿ ಯೋಜನೆಯಡಿಯಲ್ಲಿ ಇಲ್ಲಿಯ ಗ್ರಾಮ ಪಂಚಾಯ್ತಿಯವರು ನೂತನ ಗಟಾರ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗೌಡಪ್ಪ ಮಾಳೇದ ಸೋಮವಾರ ಡಿ.10 ರಂದು ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ ಮಾಡಿ ಮಾತನಾಡಿದ ಅವರು, ಸ್ಥಳೀಯ ಹೆಣ್ಣುಮಕ್ಕಳ ಕನ್ನಡ ಶಾಲೆಯ ಕಟ್ಟಡದ ಹಿಂಬದಿಯಿಂದ ಗ್ರಾಮದ ಅಶ್ವಾರೂಢ ಬಸವೇಶ್ವರ ವೃತ್ತದ ತನಕ ಎರಡು ಹಂತದಲ್ಲಿ ಒಟ್ಟು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಗಟಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಗಟಾರ್ ನಿರ್ಮಾಣ ಕಾಮಗಾರಿ ಇನ್ನೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದರು.
ಊರಿನ ಸಮಗ್ರ ಪ್ರಗತಿಯ ಹಿತದೃಷ್ಠಿಯಿಂದ ಗ್ರಾಮಸ್ಥರು ತಮ್ಮ ಮನೆ, ಅಂಗಡಿ, ಮುಗ್ಗಟ್ಟುಗಳ ಹಾಗೂ ಮತ್ತೀತರ ಕರಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಅವರಲ್ಲಿ ಕೊಡಲೇ ಪಾವತಿಸಿಕೊಳ್ಳಬೇಕು ಎಂದು ಗ್ರಾಪಂ ಪಿಡಿಒ ಬಿ.ಎಫ್.ದಳವಾಯಿ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗ್ರಾಪಂ ಕಾಕ್ರ್ಲ ಸುರೇಶ ಬಾಣಸಿ, ಪರಶುರಾಮ ಇಟಗೌಡ್ರ, ಶಿವಾನಂದ ಐದುಡ್ಡಿ, ಪ್ರಕಾಶ ಹರಿಜನ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.
“ಗ್ರಾಮದ ಅಭಿವೃದ್ಧಿ ಹಿತದೃಷ್ಠಿಯಿಂದ ಗ್ರಾಮ ಪಂಚಾಯ್ತಿ ಸದಸ್ಯರ ಹಾಗೂ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ. * ಲಕ್ಷ್ಮಣ ಚಂದರಗಿ ಅಧ್ಯಕ್ಷರು ಗ್ರಾಮ ಪಂಚಾಯ್ತಿ ಬೆಟಗೇರಿ,

Related posts: