ಖಾನಾಪುರ:6 ನೇ ಖಾನಾಪೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
6 ನೇ ಖಾನಾಪೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಖಾನಾಪುರ ನ 29 : ಮಕ್ಕಳಲ್ಲಿ ನಾಡು,ನುಡಿ,ಭಾಷೆ,ಸಂಸ್ಕøತಿಗಳ ಬಗ್ಗೆ ಸ್ವಾಭಿಮಾನ ಬೆಳಸಬೇಕೆಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಅಭಿಪ್ರಾಯಪಟ್ಟರು.
ಚಿಕ್ಕಮುನವಳ್ಳಿ ಗ್ರಾಮದಲ್ಲಿ ಗುರುವಾರ ನಡೆದ 6 ನೇ ಖಾನಾಪೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಾತನಾಡಿದರು.
ನಾಡು,ನುಡಿ,ಜಲ,ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ಎಚ್ಚರವಹಿಸಬೇಕು. ಕನ್ನಡ ಭಾಷೆ ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ತಹಶೀಲ್ದಾರ ಶಿವಾನಂದ ಉಳ್ಳಾಗಡ್ಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕ ಆಡಳಿತದ ವತಿಯಿಂದ ಸಾಹಿತ್ಯ ಸಮ್ಮೇಳನಕ್ಕೆ ಸಹಾಯ ಸಹಕಾರ ನೀಡಲಾಗುವುದು. ಕನ್ನಡತನ ಪ್ರತಿಯೊಬ್ಬನ ಕಣಕಣದಲ್ಲೂ ಇರಬೇಕೆಂದರು.
ಶ್ರೀ ಶಿವಪುತ್ರ ಶ್ರೀಗಳು ಮಾತನಾಡಿ, ಚಿಕ್ಕಮುನವಳ್ಳಿ ಚಿಕ್ಕ ಗ್ರಾಮವಾದರೂ ಆದ್ಯಾತ್ಮದ ಸವಿಯನ್ನು ನಾಡಿನೆಲ್ಲೆಡೆ ಪಸರಿಸುತ್ತಿದೆ.ಸಮ್ಮೇಳನಕ್ಕೆ ಶ್ರೀ ಮಠದಿಂದ ಎಲ್ಲ ಸಹಾಯ ಸಹಕಾರ ನೀಡಲಾಗುವುದೆಂದರು.
ತಾಲೂಕ ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ,ಗೌರವಾಧ್ಯಕ್ಷ ಈಶ್ವರ ಸಂಪಗಾವಿ,ಕೋಶಾಧ್ಯಕ್ಷ ಮಹಾಂತೇಶ ಕೊಡೊಳಿ,ನಿವೃತ್ತ ಚಿತ್ರಕಲಾ ಶಿಕ್ಷಕ ಎಸ,ಎಸ್.ಹಿರೇಮಠ, ಗ್ರಾಪಂ.ಅಧ್ಯಕ್ಷೆ ಶೀಲಾ ಸಂಪಗಾವಿ, ರಾಜು ಖಾತೇದಾರ, ದಶರಥ ಬನೋಶಿ, ಬಿಷ್ಠಪ್ಪ ಬನೋಶಿ, ಗ್ರಾಪಂ.ಸದಸ್ಯ ರುದ್ರಪ್ಪ ಗದಾಡಿ, ಮುಖ್ಯೋಪಾಧ್ಯಯ ಸಿ.ಬಿ.ಕೋಲ್ಕಾರ, ಕಲ್ಲಪ್ಪ ತೋರೊಜಿ,ಅಶೋಕ ಬೆಂಡಿಗೇರಿ, ಹಾಗೂ ಇತರರು ಉಪಸ್ಥಿತರಿದ್ದರು.
ಈರಣ್ಣಾ ಕಾದ್ರೋಳ್ಳಿ ನಿರೂಪಿಸಿದರು. ಬಿಷ್ಠಪ್ಪ ಬನೋಶಿ ಸ್ವಾಗತಿಸಿದರು. ಅಶೋಕ ಬೆಂಡಿಗೇರಿ ವಂದಿಸಿದರು.