RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ

ಗೋಕಾಕ:ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ 

ಹೇಳದೇ ಕೇಳದೇ ಮನೆಯಿಂದ ಯುವತಿ ಕಾಣೆ

ಗೋಕಾಕ ನ 19: ಯುವತಿಯೋರ್ವಳು ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿ ಕಾಣೆಯಾದ ಬಗ್ಗೆ ಇಲ್ಲಿಯ ಆದಿಜಾಂಬವ ನಗರದಲ್ಲಿ ನಡೆದಿದೆ.

ಗೋಕಾಕಿನ  ಆದಿಜಾಂಬವ ನಗರದ ನಿವಾಸಿ ಲಕ್ಷ್ಮೀ ತಂದೆ ಯಮನಪ್ಪ ಹಿರಗನ್ನವರ (20) ಈತಳು ಕಳೆದ ದಿ. 13 ರಂದು ಮಧ್ಯಾಹ್ನ ಮನೆಯಿಂದ ಯಾರಿಗೂ ಹೇಳದೇ ಹೋಗಿರುತ್ತಾಳೆ ಎಂದು ಯುವತಿಯ ಚಿಕ್ಕಪ್ಪ ಅಶೋಕ ಯಮನಪ್ಪ ಹಿರಗನ್ನವರ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ಯುವತಿ 4 ಫೂಟ್ 5 ಇಂಚ್ ಎತ್ತರವಿದ್ದು, ಕೆಂಪು ಬಣ್ಣ, ಮೈಯಿಂದ ತೆಳ್ಳಗೆ ದುಂಡುಮುಖ ಹೊಂದಿದ್ದಾಳೆ. ಮೈಮೇಲೆ ನೀಲಿ ಬಣ್ಣದ ಚೂಡಿದಾರ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.

ಈ ಯುವತಿಯ ಬಗ್ಗೆ ಯಾರಿಗಾದರೂ ಏನಾದರೂ ಮಾಹಿತಿಯಿದ್ದರೆ ಗೋಕಾಕ ಶಹರ ಪೊಲೀಸ್ ಠಾಣೆ ಸಂಪರ್ಕ ಸಂಖ್ಯೆ – 08332- 225033 ಅಥವಾ ಬೆಳಗಾವಿ ಪೊಲೀಸ್ ಕಂಟ್ರೋಲ್ ರೂಮ್ ಸಂಪರ್ಕ ಸಂಖ್ಯೆ 0831-2405255 ಗೆ ತಿಳಿಸಿಲು ಪ್ರಕಟನೆಯಲ್ಲಿ  ಕೋರಲಾಗಿದೆ.

Related posts: