RNI NO. KARKAN/2006/27779|Saturday, February 14, 2026
You are here: Home » breaking news » ಮೂಡಲಗಿ:ಮಂಜುನಾಥ ರೇಳೆಕರ ಅಭಿನದ ಚಿತ್ರ “ ಕನ್ನಡ ದೇಶದೊಳ್” ನಾಳೆ ಅದ್ದೂರಿ ಪ್ರದರ್ಶನ

ಮೂಡಲಗಿ:ಮಂಜುನಾಥ ರೇಳೆಕರ ಅಭಿನದ ಚಿತ್ರ “ ಕನ್ನಡ ದೇಶದೊಳ್” ನಾಳೆ ಅದ್ದೂರಿ ಪ್ರದರ್ಶನ 

ಮಂಜುನಾಥ ರೇಳೆಕರ ಅಭಿನದ ಚಿತ್ರ “ ಕನ್ನಡ ದೇಶದೊಳ್” ನಾಳೆ ಅದ್ದೂರಿ ಪ್ರದರ್ಶನ

ಮೂಡಲಗಿ ಅ 31 : ಜೆಎನ್‍ಎಸ್ ಪ್ರೋಡಕ್ಸನ್ ನಿರ್ಮಾಣದ ನಿರ್ದೇಶಕ ಅವಿರಾಮ್ ಕಂಠೀರವ ನಿರ್ದೇಶನದ ರಾಜ್ಯದ್ಯಂತ ಸಂಚಲನಾ ಮೂಡಿಸಿರುವ ಬಹು ನೀರಿಕ್ಷಿತ “ ಕನ್ನಡ ದೇಶದೊಳ್” ಚಲನಚಿತ್ರದ ಪ್ರದರ್ಶನಕ್ಕೆ ವೆಂಕಟೇಶ್ ಚಿತ್ರ ಮಂದಿರವೂ ಸಕಲ ರೀತಿಯಲ್ಲಿ ಸಜ್ಜಗಿದೆ. ಚಿತ್ರದ ಪೋಸ್ಟರ್, ದೀಪಾಲಂಕಾರ ಮತ್ತು ಹಳದಿ ಕೆಂಪು ತೋರಣಗಳಿಂದ ಚಿತ್ರಮಂದಿರ ರಾರಾಜಿಸುತ್ತಿದೆ.

ಕನ್ನಡ ನೆಲ, ಜಲ ಭಾಷೆಗೆ ಸಂಬಂಧಿಸಿದ “ಕನ್ನಡ ದೇಶದೊಳ್” ಚಲನಚಿತ್ರವು ಕನ್ನಡ ರಾಜ್ಯೋತ್ಸವದ ದಿನವಾದ ನಾಳೆ ಮಧ್ಯಾಹನ 12ಗಂಟೆಗೆ ಪ್ರದರ್ಶನವಾಗಲಿದೆ. ಪಟ್ಟಣದ ಕಲ್ಮೇಶ್ವರ ವೃತ್ತ ಮತ್ತು ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮಣ ಅಡಿಹುಡಿ ಶಾಲೆ ಹಾಗೂ ರಾಜ್ಯದ 30ಜಿಲ್ಲೆಗಳ ಸುತ್ತಮುಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು ಸ್ಥಳೀಯ ಕಲಾವಿದ ಮಂಜುನಾಥ ರೇಳೆಕರ ಅಭಿನಯಿಸಿರುವ ಚಿತ್ರ ಶತದಿನ ಪ್ರದರ್ಶನ ಕಾಣಲಿ ಎಂದು ಕನ್ನಡಭಿಮಾನಿಗಳು ಶುಭಾಕೋರುತ್ತಿದ್ದಾರೆ.

Related posts: