RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ:ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ 

ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ ಅ 6 : ಅಂತರ್‍ರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಭೀಮರಾವ್ ಮುರಗೋಡ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಮೂಲತಃ ಶಿಂಧಿಕುರಬೇಟ ಗ್ರಾಮದವರಾಗಿದ್ದ ಮುರಗೋಡ ಅವರು ತೈಲ ವರ್ಣದ ಭಾವಚಿತ್ರಗಳನ್ನು ಬಿಡಿಸುವ ಮೂಲಕ ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಗಮನ ಸೆಳೆದ ಕಲಾವಿದರಾಗಿದ್ದರು. ಈ ಮೂಲಕ ಗೋಕಾಕ ತಾಲೂಕಿನ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಿಕ್ಕೆ ಕಾರಣರಾಗಿದ್ದರು. ದೇಶ ವಿದೇಶಗಳ ಅಗ್ರಗಣ್ಯ ನಾಯಕರುಗಳ ಜೀವಂತ ಅಚ್ಚನ್ನು ತಮ್ಮ ಕಲಾ ಕುಂಚದಿಂದ ಸ್ಥಳದಲ್ಲಿಯೇ ಬಿಡಿಸುವ ಮೂಲಕ ಅಪ್ರತಿಮ ಚಿತ್ರ ಕಲಾವಿದರಾಗಿದ್ದರು ಎಂದು ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಂತಾಪ ಸೂಚಕದಲ್ಲಿ ಸ್ಮರಿಸಿಕೊಂಡಿದ್ದಾರೆ.

Related posts: