RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಸಂಪುಟದಲ್ಲಿ ದೊರಕದ ಸ್ಥಾನ : ಹಾಲುಮತ ಮಹಾಸಭಾದಿಂದ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ:ಸಂಪುಟದಲ್ಲಿ ದೊರಕದ ಸ್ಥಾನ : ಹಾಲುಮತ ಮಹಾಸಭಾದಿಂದ ಗೋಕಾಕದಲ್ಲಿ ಪ್ರತಿಭಟನೆ 

ಸಂಪುಟದಲ್ಲಿ ದೊರಕದ ಸ್ಥಾನ : ಹಾಲುಮತ ಮಹಾಸಭಾದಿಂದ ಗೋಕಾಕದಲ್ಲಿ ಪ್ರತಿಭಟನೆ
ಗೋಕಾಕ ಜೂ 9 : ಕಾಂಗ್ರೆಸ್ ಪಕ್ಷದಲ್ಲಿ 8 ಜನ ಶಾಸಕರಿದ್ದು ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದ ಪಕ್ಷದ ನಿರ್ಧಾರವನ್ನು ಖಂಡಿಸಿ ಹಾಲುಮತ ಮಹಾಸಭಾದ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು

ಶನಿವಾರದಂದು ಮಧ್ಯಾಹ್ನ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕೈ ನಾಯಕರ ವಿರುದ್ಧ ಷೋಷಣೆ ಕೂಗಿ ಟೈಯರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

ಸಿದ್ದರಾಮಯ್ಯ ನವರ ನಾಯಕತ್ವದಲ್ಲಿ ಸಮಾಜದ ಎಲ್ಲ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೆವೆ ಆದರೆ ದೋಸ್ತಿ ಸರಕಾರದಲ್ಲಿ ಹಾಲುಮತ ಸಮಾಜದ ಶಾಸಕರಿಗೆ ಯೋಗ್ಯ ಸ್ಥಾನ ಮಾನ ದೊರೆತಿಲ್ಲದಿರುವುದು ಖೇದಕರ ಆದಷ್ಟು ಬೇಗ ಪಕ್ಷದ ಈ ಕ್ರಮವನ್ನು ಸರಿಪಡಿಸಿಕೊಂಡು ಕೈ ಮುಖಂಡರು ಹಾಲುಮತ ಸಮಾಜ ಶಾಸಕರಲ್ಲಿ ಕನಿಷ್ಠ 4 ಜನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ

ಈ ಸಂದರ್ಭದಲ್ಲಿ ಸೋಮಣ್ಣ ಮೌರ್ಯ , ಮಾರುತಿ ಮರಡಿ , ವೀರು ಮೋಡಿ, ಗಣೇಶ ಚಿಪ್ಪಲಕಟ್ಟಿ , ಹಮಮಂತ ಪೆಟ್ಟೂರ , ರಾಮೋಜಿ ಮಾಳಗಿ , ವಿನಾಯಕ ಕಟ್ಟಿಕಾರ ಸೇರಿದಂತೆ ಅನೇಕರು ಇದ್ದರು

Related posts:

ಗೋಕಾಕ:ಫ್ರಂಟ್ ಲೈನ್ ವಾರಿಯರ್ಸ್ಗ ಗೆ ಅವಮಾನ : ಸಿಪಿಐ ಮುರನಾಳ ಮೇಲೆ ಸೂಕ್ತ ಕ್ರಮಕ್ಕೆ ಗೋಕಾಕ ಪತ್ರಕರ್ತರ ಆಗ್ರಹ

ಬೆಳಗಾವಿ:ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಸೂಕ್ತ ಕ್ರಮ : ಹೆಚ್ಚುವರಿ ಎಸ್.ಪಿ ನಂದಗಾವಿ

ಗೋಕಾಕ:ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ…