RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು 2ನೇ ಹಂತದ ತರಬೇತಿ

ಗೋಕಾಕ:ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು 2ನೇ ಹಂತದ ತರಬೇತಿ 

ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು 2ನೇ ಹಂತದ ತರಬೇತಿ

ಗೋಕಾಕ ಮೇ 6 : ಅರಭಾಂವಿ ಹಾಗೂ ಗೋಕಾಕ ಮತಕ್ಷೇತ್ರದಲ್ಲಿನ ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು ಜರುಗುವ 2ನೇ ಹಂತದ ತರಬೇತಿಗಾಗಿ ಬೆಳಗಾವಿ ಜಿಲ್ಲೆಯ ವಿವಿಧ ಮತಕ್ಷೇತ್ರಗಳಿಗೆ ನಿಯೋಜಿಸಿ ತರಬೇತಿ ಹಾಜರಾಗಲು ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶಗಳನ್ನು ನೀಡಿರುತ್ತಾರೆ. ಅದರಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಜರುಗುವ ತರಬೇತಿಗೆ ತೆರಳಲು ನಗರದ ವಾಲ್ಮೀಕಿ ಕ್ರೀಡಾಂಗಣದಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು ಮತಗಟ್ಟೆಯ ಅಧಿಕಾರಿಗಳು ತಮ್ಮ ಆದೇಶ ಪತ್ರದೊಂದಿಗೆ ದಿ. 7 ರಂದು ಮುಂಜಾನೆ 6 ಗಂಟೆಗೆ ಹಾಜರಿದ್ದು ತಮಗೆ ನಿಗದಿಪಡಿಸಿದ ಬಸ್ ಮುಖಾಂತರ ತರಬೇತಿಗೆ ಹಾಜರಾಗಬೇಕೆಂದು ಪ್ರಕಟನೆಯಲ್ಲಿ ಅರಭಾಂವಿ ಹಾಗೂ ಗೋಕಾಕ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಜಂಟಿಯಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: