ಗೋಕಾಕ:ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ
ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ
ಗೋಕಾಕ ಫೆ 7 : ಬದುಕಿನ ಆಯಾಮಗಳಲ್ಲಿ ನಮ್ಮ ಮಕ್ಕಳನ್ನು ಸರ್ವ ಶ್ರೇಷ್ಠ ಮಕ್ಕಳನ್ನಾಗಿ ಬೆಳೆಸಲು ಶಿಕ್ಷಣ ಬಹುಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಮಂಗಳವಾರದಂದು ರಾತ್ರಿ ಇಲ್ಲಿಯ ಅಂಬೇಡ್ಕರ್ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡಬೇಕು. ಮಕ್ಕಳಲ್ಲಿ ಉನ್ನತ ಅಧಿಕಾರಿಗಳಾಗುವಂತಹ ಕನಸುಗಳಿಂದ ಪ್ರೇರೆಪಿಸಿ ಅವುಗಳ ನನಸಾಗುವಂತೆ ಮಾಡಲು ವಾತವರಣ ನಿರ್ಮಿಸಬೇಕು. ಅಲ್ಪ ಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಸಮುದಾಯ ಜನ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಸದಸ್ಯ ಭೀಮಶಿ ಭರಮಣ್ಣವರ ಮಾಜಿ ಸದಸ್ಯ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಬಿಸಿಯೂಟದ ಯೋಜನಾಧಿಕಾರಿ ಎಮ್.ಡಿ.ಬೇಗ, ಎಸ್‍ಡಿಎಮ್‍ಸಿ ಅಧ್ಯಕ್ಷ ಡಾ|| ಎನ್.ಡಿ.ಜಮಾದಾರ, ಎಲ್.ಎಲ್.ಅಥಣಿ, ಅಬ್ಬಾಸ ದೇಸಾಯಿ, ಸಾಧಿಕ ಹಲ್ಯಾಳ, ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ, ಮುಖ್ಯೋಪಾಧ್ಯಯರಾದ ಬಿ.ಆರ್.ಮುರಗೋಡ, ಜಿ.ಆರ್.ಮಾಳಗಿ, ಆರ್.ಕೆ.ಸನದಿ, ಆರ್.ಎಲ್.ಮಿರ್ಜಿ ಇದ್ದರು.