RNI NO. KARKAN/2006/27779|Sunday, September 24, 2023
You are here: Home » breaking news » ಗೋಕಾಕ:ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ

ಗೋಕಾಕ:ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ 

ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ

ಗೋಕಾಕ ಅ 30 : ತಾಲೂಕಿನ ಧುಪದಾಳ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯು ಬುಧವಾರದಂದು ಜರುಗಿತು.
ಸಭೆಯು ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ ಅಧ್ಯಕ್ಷತೆಯಲ್ಲಿ ಜರುಗಿತು.
ತಾಲೂಕಾಧ್ಯಕ್ಷರಾಗಿ ರಾಜು ಹೂಲಿಕಟ್ಟಿ, ಉಪಾಧ್ಯಕ್ಷರಾಗಿ ಮಾರುತಿ ನಾಯಿಕ, ಕಾರ್ಯಾಧ್ಯಕ್ಷರಾಗಿ ಮಂಜುನಾಥ ಪೂಜೇರಿ, ಕಾರ್ಯದರ್ಶಿಯಾಗಿ ಯಲ್ಲಪ್ಪ ತಿಗಡಿ, ಸಂಚಾಲಕರಾಗಿ ಪುಂಡಲೀಕ ನಿಡಸೋಸಿ, ವಿಜಯ ಕೋಳಿ, ಮಲಕಾಜಿ ಬಾಗನ್ನವರ, ರಾಮಪ್ಪ ಡಬಾಜ, ಹಸಿರು ಸೇನೆ ಕಾರ್ಯದರ್ಶಿ ಶಿದ್ರಾಮ ಪೂಜೇರಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ನಂದಗಾಂವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರೈತ ಸಂಘದ ಮುಖಂಡರಾದ ಸತ್ಯಪ್ಪ ಮಲ್ಲಾಪೂರೆ, ಭರಮು ಖೇಮಲಾಪೂರೆ,ಶ್ರೀಶೈಲ ಅಂಗಡಿ, ಈರಣ್ಣಾ ಸಸಾಲಟ್ಟಿ, ಗೋಪಾಲ ಕುಕನೂರ, ಪ್ರಕಾಶ ತೇರದಾಳ, ಲಗಮಣ್ಣಾ ಕರಿಗಾರ, ಶಿವಪುತ್ರ ಪತ್ತಾರ, ಕುಮಾರ ಮರ್ದಿ ಸೇರಿದಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಕಾರ್ಯಕರ್ತರು ಇದ್ದರು.

Related posts: