RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಗೋಕಾಕ:ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ 

ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಗೋಕಾಕ ಜ 6: ಬೆಳಗಾವಿ ಜಿಲ್ಲಾ ಸರ್ಕಾರಿ ಪ್ರಥಮ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘವು ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಮಾನ್ಯ ರಮೇಶ ಜಾರಕಿಹೊಳಿ ಅವರಿಗೆ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತು ಮನವಿ ಸಲ್ಲಿಸಿತು. ಅತಿಥಿ ಉಪನ್ಯಾಸಕರ ಒಂದು ದಿನದ ಸಾಂಕೇತಿಕ ಧರಣಿಯ ನಿಮಿತ್ತ ಗೋಕಾಕದ ಸಚಿವರ ನಿವಾಸದಲ್ಲಿ ಮುಂಜಾನೆ 11:00 ಗಂಟೆಗೆ ಬೆಳಗಾವಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ರಾಜು ಕಂಬಾರ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು. ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಜು ಕಂಬಾರ, ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ 2016-17ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು. ಅತಿಥಿ ಉಪನ್ಯಾಸಕರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಕೇವಲ ರೂ.11,000/- ಈಗಿನ ಕಾಲಕ್ಕೆ ಯಾವುದಕ್ಕೂ ಸಾಕಾಗುತ್ತಿಲ್ಲ. ಶೈಕ್ಷಣಿಕ ವರ್ಷದಲ್ಲಿ ದುಡಿಯುತ್ತಿರುವವರಿಗೆ ಮುಂದಿನ ವರ್ಷ ಉದ್ಯೋಗ ದೊರೆಯುತ್ತದೆಂಬ ಭದ್ರತೆ ಇರುವುದಿಲ್ಲ. ಇದರಿಂದಾಗಿ ನೂರಾರು ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಈ ವಿಷಯವಾಗಿ ಇತ್ತೀಚೆಗೆ ಗೋಕಾಕ ನಗರಕ್ಕೆ ಆಗಮಿಸಿದ ಮಾನ್ಯ ಮುಖ್ಯಮಂತ್ರಿಗಳಿಗೂ ಮನವಿ ಮಾಡಿಕೊಂಡಿದ್ದೇವೆ. ಮುಂದಿನ ಸಚಿವ ಸಂಪುಟದಲ್ಲಿ ತಾವೂ ಕೂಡಾ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತು ಮಾತನಾಡಿ ಸೂಕ್ತ ತೀರ್ಮಾಣ ಕೈಗೊಳ್ಳಬೇಕೆಂದು ಸಚಿವರನ್ನು ವಿನಂತಿಸಿದರು.
ಅತಿಥಿ ಉಪನ್ಯಾಸಕರ ಮನವಿ ಸ್ವೀಕರಿಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ರಮೇಶ ಲ. ಜಾರಕಿಹೊಳಿ ಅವರು ಮಾತನಾಡಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರಕಾರಕ್ಕೂ ಕಾಳಜಿ ಇದೆ. ಸೇವಾ ಭದ್ರತೆ ಕುರಿತಾಗಿ ಸಂಬಂಧಿಸಿದ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಸಾಧ್ಯವಾದಷ್ಟು ಸಚಿವ ಸಂಪುಟದಲ್ಲಿ ಅತಿಥಿ ಉಪನ್ಯಾಸಕರ ವಿಷಯ ಚರ್ಚೆಗೆ ತರುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ವಿಕಲಚೇತನ ಅತಿಥಿ ಉಪನ್ಯಾಸಕರ ಉಪಾಧ್ಯಕ್ಷ ರವಿ ಮೆಟಗೇರಿ, ಅತಿಥಿ ಉಪನ್ಯಾಸಕರ ಮುಖಂಡರಾದ ನಿಂಗಪ್ಪ ಸಂಗ್ರೇಜಿಕೊಪ್ಪ, ಯರಿಯಪ್ಪ ಬೆಳಗುರ್ಕಿ, ವ್ಹಿ.ಸಿ. ಹುಣಶ್ಯಾಳಿ, ಎಸ್.ಎಸ್.ಗಾಣಿಗೇರ, ಎಸ್.ಡಿ.ವಾಲಿಕಾರ, ಎಸ್.ಎಂ.ಪೂಜೇರಿ, ಎಂ.ಬಿ.ಹೂಲಿ, ಬಿ.ಎಂ.ಮಾಸ್ತಿಹೊಳಿ, ಡಾ.ಸುನೀಲ ಕಾಂಬಳೆ, ಬಿ.ಎ.ದೇಸಯಿ, ಐ.ಎಂ.ಐಹೊಳೆ, ಎಸ್.ಬಿ.ಕಿವಡಗಿ, ಎಂ.ಡಿ.ಹಲಕರ್ಣಿ, ಎನ್.ಬಿ.ಕೊಪ್ಪದ ಮುಂತಾದವರು ಹಾಜರಿದ್ದರು.

Related posts: