RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ : ಮುತ್ತೆಪ್ಪ ಬಾಗನ್ನವರ

ಗೋಕಾಕ:ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ : ಮುತ್ತೆಪ್ಪ ಬಾಗನ್ನವರ 

ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ :
ಮುತ್ತೆಪ್ಪ ಬಾಗನ್ನವರ

ಗೋಕಾಕ ಜ 4: ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಮಟ್ಟದ ಸಭೆಯು ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ ಅಧ್ಯಕ್ಷತೆಯಲ್ಲಿ ಗುರುವಾರದಂದು ಜರುಗಿತು.
ಸಭೆಯಲ್ಲಿ ತೆಲಂಗಾಣ ರಾಜ್ಯದ ಮಾದರಿಯಲ್ಲಿ ದಿನದ 24 ಗಂಟೆಗೆ ರೈತರಿಗೆ ಉಚಿತವಾಗಿ ವಿದ್ಯುತ್ತ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲು ರೂಪರೇಷಗಳನ್ನು ಹಾಕಿಕೊಳ್ಳುವ ಕುರಿತು ಚರ್ಚಿಸಲಾಯಿತು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಾವರಿ ಸಮಸ್ಯೆಗಳಿದ್ದು ಅವುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದರ ಬಗ್ಗೆ ಚರ್ಚಿಸಲಾಯಿತಲ್ಲದೇ ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಸಂಭಂದಿಸಿದ ಅಧಿಕಾರಿಗೆ ಒತ್ತಾಯಿಸಲಾಗುವುದು.
ತಾಲೂಕಿನ್ಯಾದ್ಯಂತ ಅನಧಿಕೃತವಾಗಿ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದ್ದು ಕೂಡಲೇ ಅಬಕಾರಿ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಗಮನ ಹರಿಸದಿದ್ದರೆ ಎರಡು ಇಲಾಖೆ ಕಾರ್ಯಾಲಯಗಳ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲು ತಿರ್ಮಾನಿಸಲಾಯಿತಲ್ಲದೇ ಪ್ರಸಕ್ತ ಸಾಲಿನ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿ 2 ತಿಂಗಳು ಕಳೆದರೂ ಕಬ್ಬು ಪೂರೈಸಿದ ರೈತರಿಗೆ ತಕ್ಷಣವೇ ಬಿಲ್ಲ್‍ನ್ನು ಪಾವತಿಸಬೇಕು. ಬಿಲ್ಲ್‍ನ್ನು ಪಾವತಿಸದ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ, ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ತಾಲೂಕಾ ಕಾರ್ಯಾಧ್ಯಕ್ಷ ಮಂಜುನಾಥ ಪೂಜೇರಿ, ಮುಖಂಡರಾದ ಸತ್ತೆಪ್ಪ ಮಲ್ಲಾಪೂರೆ, ಗೋಪಾಲ ಕುಕನೂರ, ಸಿದ್ದಲಿಂಗ ಪೂಜೇರಿ, ಯಲ್ಲಪ್ಪ ತಿಗಡಿ, ವಿಜಯ ಕೋಳಿ, ಮಾರುತಿ ಸಾವಳಗಿ, ಶಿವಪುತ್ರ ಪತ್ತಾರ, ಪ್ರದೀಪ ಪೂಜೇರಿ, ಮುತ್ತೆಪ್ಪ ಕುರಬರ, ಪ್ರಕಾಶ ಹಾಲನ್ನವರ, ಅಡಿವೆಪ್ಪ ಬುಳ್ಳಿ, ಮಲ್ಲಿಕಾಜ ಬಾಗನ್ನವರ, ರಾಜು ಹೂಲಿಕಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: