ಗೋಕಾಕ:ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು : ಅಮರನಾಥ ಜಾರಕಿಹೊಳಿ ಅಭಿಮತ

ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು : ಅಮರನಾಥ ಜಾರಕಿಹೊಳಿ ಅಭಿಮತ
ಗೋಕಾಕ ಡಿ 23 : ಕ್ರೀಡೆಯಲ್ಲಿ ಭಾಗವಹಿಸುವದರಿಂದ ಸಾಮರಸ್ಯ ವೃದ್ಧಿಯಾಗುದಲ್ಲದೆ ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು’ ಎಂದು ಯುವ ಧುರೀಣ ಅಮರನಾಥ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಶನಿವಾರದಂದು ಇಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ಅವರು ಆಯೋಜಿಸಿದ್ದ ಸರಕಾರಿ ನೌಕರರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಸಸಿಗೆ ನೀರೆಯುವ ಚಾಲನೆ ನೀಡಿ ಅವರು ಮಾತನಾಡಿದರು.
ಜವಾಬ್ದಾರಿಯುತ ಹುದ್ದೆಗಳ ಕರ್ತವ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಸಿಬ್ಬಂದಿ, ಕ್ರೀಡೆಗಳನ್ನು ಆಯೋಜನೆ ಮಾಡಿರುವುದು ಸಂತಸದ ವಿಚಾರ. , ಪೊಲೀಸರು, ಶಿಕ್ಷಕವರ್ಗ, ಕಂದಾಯ ಇಲಾಖೆಯವರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ’ ಎಂದ ಅವರು ಕ್ರೀಡೆ ಸ್ನೇಹ ಹಾಗೂ ವಿಶ್ವಾಸ ವೃದ್ಧಿಸುತ್ತದೆ. ಸೌಹಾರ್ದಯುತ ಕ್ರೀಡೆಯಿಂದ ಎಲ್ಲರೂ ಸಂತಸದಿಂದ ಬೆರೆಯಲು ಅವಕಾಶ ಸಿಗುತ್ತದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಜಿ.ಬಿ.ಬಳಗಾರ, ಸಿಪಿಐ ಶ್ರೀಶೈಲ ಬ್ಯಾಕೂಡ, ವಲಯ ಅರಣ್ಯಾಧಿಕಾರಿಗಳಾದ ಸಂಜೀವ ಸಂಸುದ್ದಿ, ಆನಂದ ಹೆಗಡೆ, ಕೃಷಿ ಅಧಿಕಾರಿ ಎಂ.ಎಂ ನಧಾಫ್, ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಹೆಸ್ಕಾಂ ಅಧಿಕಾರಿ ಎಸ್.ಪಿ ವರಾಳೆ, ಸಹ ನಿರ್ದೇಶಕ ಎ.ಬಿ.ಮಲಬನ್ನವರ, ಪಿಎಸ್ಐ ಕೆ.ಬಿ.ವಾಲಿಕರ, ಬಿ.ಆರ್.ಮುರಗೋಡ ಉಪಸ್ಥಿತರಿದ್ದರು.