ಘಟಪ್ರಭಾ:ಕುರುಬ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಲು ಸಂಘಟನೆಯ ಅವಶ್ಯ : ಡಿ.ಎಂ ದಳವಾಯಿ
ಕುರುಬ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಲು ಸಂಘಟನೆಯ ಅವಶ್ಯ : ಡಿ.ಎಂ ದಳವಾಯಿ
ಘಟಪ್ರಭಾ ಡಿ 18: ಮಲ್ಲಾಪೂರ ಪಿ.ಜಿ ಪಟ್ಟಣದ ದಡ್ಡಿ ಶ್ರೀಲಕ್ಷ್ಮೀ ದೇವಿ ಗುಡಿ ಆವರಣದಲ್ಲಿ ಹಾಲುಮತ ಮಹಾಸಭಾ ಸಂಗೋಳ್ಳಿ ರಾಯಣ್ಣ ಯುವ ಜಾಗೃತಿಯ ಸಂಘಟನಾ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾ.ಪಂ ಮಾಜಿ ಅಧ್ಯಕ್ಷ ಡಿ.ಎಂ ದಳವಾಯಿ ವೀರ ಸಂಗೋಳ್ಳಿ ರಾಯಣ್ಣನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕುರುಬ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಲು ಸಂಘಟನೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸೋಮಣ್ಣ ಮಲ್ಲೂರ ಮಾತನಾಡಿ ಸಮುದಾಯದ ಏಳ್ಗೆಗೆಗೆ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಯುವಕರು ಸಮಾಜ ಸಂಘಟಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಸಂಚಾಲಕರಾದ ವೀರಣ್ಣ ಮೋಡಿ ಮಾತನಾಡಿ ಯುವಕರು ರಾಜಕೀಯದಲ್ಲಿ ತೋರಿಸುವ ಆಸಕ್ತಿಯನ್ನು ಸಮಾಜದ ಕಾರ್ಯಗಳಲ್ಲಿ ತೋರಿಸಿದರೆ ಕುರುಬ ಸಮಾಜ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಹೊಂದುವದು ಎಂದರು.
ಹಾಲು ಮತ ಮಹಾಸಭಾ ಘಟಕದ ಅಧ್ಯಕ್ಷ ಶಿವಾನಂದ ಖಾನೋಜಿ, ಕರೆಪ್ಪ ನಿಡಗುಂದಿ, ಅಡಿವೆಪ್ಪ ನಿಡಗುಂದಿ, ಯಲ್ಲಪ್ಪ ಖಾನೋಜಿ, ಕಲ್ಲಪ್ಪ ದೊಡಮನಿ, ಮುತ್ತೇಪ್ಪ ನಿಡಗುಂದಿ, ಕಲ್ಲಪ್ಪ ಗೌಡನಾರ, ತುಕ್ಕಪ್ಪ ತಿಪ್ಪಣಗೋಳ, ಗೋಪಾಲ ತಿಪ್ಪಣಗೋಳ, ಭೀರಪ್ಪ ಖಾನೋಜಿ, ಹಾಲಪ್ಪ ನಿಡಸೋಸಿ, ಭೀಮಪ್ಪ ನಿಡಗುಂದಿ, ಕರೆಪ್ಪ ನಿಡಗುಂದಿ, ಮಲ್ಲಪ್ಪ ಶಿರಹಟ್ಟಿ, ಸೇರಿದಂತೆ ಅನೇಕ ಕಾರ್ಯಕರ್ತರು ಸದಸ್ಯರು ಇದ್ದರು.
ಕಾರ್ಯಕ್ರಮದ ಎನ್.ಎಸ್. ತೋಳಿ ನಿರೂಪಿಸಿದರು, ಎಸ್.ಎಸ್.ಪಾಟೀಲ ವಂದಿಸಿದರು.