ಗೋಕಾಕ:ರಾಹುಲ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ

ರಾಹುಲ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ
ಗೋಕಾಕ ಅ 2 : ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ, ಡಿಸಿಸಿ ಹಾಗೂ ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರ 27ನೇ ಹುಟ್ಟು ಹಬ್ಬದ ನಿಮಿತ್ತ ನಗರದ ಸತೀಶ್ ಶುಗರ್ಸ್ ಅಕಾಡೆಮಿಯಲ್ಲಿ ಬೃಹತ್ ಐಚ್ಛಿಕ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿದರು .
ಯುವಕರು ಸೇರಿದಂತೆ ಹಲವರು ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಲಕ್ಷೇಟ್ಟಿ, ವಿ.ಆರ್.ಪರಸನ್ನವರ, ಬಿ.ಎಚ್.ಸ್ವಾಮಿ, ಮಹೇಶ ಚಿಕ್ಕೋಡಿ, ಮಾರುತಿ ಗೊರಗುದ್ದಿ, ಡಾ.ರವೀಂದ್ರ ಮಾಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
