RNI NO. KARKAN/2006/27779|Thursday, September 24, 2026
You are here: Home » breaking news » ಗೋಕಾಕ:ಪ್ರಧಾನಿ ನರೇಂದ್ರ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ : ಶಾಸಕ ರಮೇಶ್

ಗೋಕಾಕ:ಪ್ರಧಾನಿ ನರೇಂದ್ರ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ : ಶಾಸಕ ರಮೇಶ್ 

ಪ್ರಧಾನಿ ನರೇಂದ್ರ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ : ಶಾಸಕ ರಮೇಶ್

ಗೋಕಾಕ ಸೆ 24 : ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 25ವರ್ಷಗಳ ಅನುಭವದಲ್ಲಿ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜನರ ಮನದಲ್ಲಿ ನೆಲಸುವದರೊಂದಿಗೆ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.
ಅವರು, ಗುರುವಾರದಂದು ನಗರದ ಸಮುದಾಯ ಭವನದಲ್ಲಿ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮ ದಿನದ ನಿಮಿತ್ಯ ಹಮ್ಮಿಕೊಂಡ ಸೇವಾ ಸಂಕಲ್ಪ ಅಭಿಯಾನದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯ ಕುಟುಂಬದಿಂದ ಬಂದ ಮೋದಿಯವರು ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರಾಗಿ ಇಂದು ದೇಶದ ಪ್ರಧಾನಿಯಾಗಿದ್ದಾರೆ. ಇದು ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಗೌರವಕ್ಕೆ ಉದಾಹರಣೆಯಾಗಿದೆ. ಅವರು ತಮ್ಮ ಜೀವನವನ್ನೆ ದೇಶ ಸೇವೆಗೆ ಮುಡಿಪಾಗಿಟ್ಟು ತಮ್ಮ ಕಾರ್ಯವೈಖರಿಯಿಂದ ಜನಸಾಮಾನ್ಯರ ಮನದಲ್ಲಿ ನೆಲೆಸಿದ್ದಾರೆ. ಇದನ್ನು ಸಹಿಸದ ವಿರೋಧಿಗಳು ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರು ಇದಕ್ಕೆ ತಕ್ಕ ಉತ್ತರ ನೀಡಬೇಕು. ಎಲ್ಲರೂ ಸಂಘಟಿತರಾಗಿ ದೇಶ ಬಲಿಷ್ಠಗೊಳಿಸುವ ಮೋದಿಜಿಯವರ ಕಾರ್ಯಕ್ಕೆ ಸಹಕಾರ ನೀಡಿ. ವಿರೋಧಿಗಳು ಮಾಡುವ ಷಡ್ಯಂತ್ರಕ್ಕೆ ಜನರಲ್ಲಿ ಜಾಗೃತಿ ಮೂಢಿಸಿ. ಮುಂಬರುವ ಚುನಾವಣೆಗಳಲ್ಲಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಪಕ್ಷವನ್ನು ಬಲಿಷ್ಠಗೊಳಿಸಿ. ಮೋದಿಜಿಯವರ ಹುಟ್ಟು ಹಬ್ಬದ ನಿಮಿತ್ಯ ಒಂದು ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಹುಟ್ಟು ಹಬ್ಬ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅವರ ಹುಟ್ಟು ಹಬ್ಬದ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮ ಹಾಗೂ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಬಿಜೆಪಿ ಮುಖಂಡರಾದ ಭೀಮಗೌಡ ಪೋಲಿಸಗೌಡರ, ಶಾಮಾನಂದ ಪೂಜೇರಿ, ಸುರೇಶ ಸನದಿ, ಹನಮಂತ ದುರ್ಗನ್ನವರ, ಸುರೇಶ ಪಾಟೀಲ, ಶಕೀಲ ಧಾರವಾಡಕರ, ಆನಂದ ಅತ್ತುಗೋಳ, ಬಾಳೇಶ ಗಿಡ್ಡನವರ, ಶಿವಾನಂದ ಪಾಟೀಲ, ಗೀತಾ ಜರತಾರಕರ, ಭಾರತಿ, ರಾಜೇಶ್ವರಿ ಒಡೆಯವರ, ಸುರೇಶ ಪತ್ತಾರ ಇದ್ದರು.

Related posts: