ಗೋಕಾಕ:ಶ್ರೇಷ್ಠವಾದ ರಕ್ತದಾನ ಮಾಡಿ ಜೀವ ಉಳಿಸುವಂತಹ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ : ಪರಶುರಾಮ ಗಸ್ತೆ

ಶ್ರೇಷ್ಠವಾದ ರಕ್ತದಾನ ಮಾಡಿ ಜೀವ ಉಳಿಸುವಂತಹ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ : ಪರಶುರಾಮ ಗಸ್ತೆ
ಗೋಕಾಕ ಸೆ 3 : ಶ್ರೇಷ್ಠವಾದ ರಕ್ತದಾನ ಮಾಡಿ ಜೀವ ಉಳಿಸುವಂತಹ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣವೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಹೇಳಿದರು.
ಅವರು, ಗುರುವಾರದಂದು ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕಾಡಳಿತ, ತಾಪಂ ಹಾಗೂ ವಿವಿಧ ಇಲಾಖೆಗಳ ಮತ್ತು ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಕ್ತವನ್ನು ಉತ್ಪತ್ತಿಮಾಡಲು ಸಾಧ್ಯವಿಲ್ಲ. ಅದನ್ನು ದಾನಿಗಳಿಂದಲೆ ಪಡೆಯಬೇಕು. ರಕ್ತದಾನ ಮಾಡಿ ಗುರು ನಮನ ಸಲ್ಲಿಸುತ್ತಿರುವದು ಅರ್ಥಪೂರ್ಣವಾಗಿದೆ. ತಾವೆಲ್ಲರೂ ರಕ್ತದಾನದ ಕುರಿತು ಜಾಗೃತಿ ಮೂಢಿಸಿ ಹೆಚ್ಚು ಹೆಚ್ಚು ರಕ್ತದಾನ ಹಾಗೂ ನೇತ್ರದಾನ ಮಾಡಲು ಜನರನ್ನು ಪ್ರೇರೆಪಿಸುವಂತೆ ಕರೆ ನೀಡಿದರು.
ಈ ಶಿಭಿರವನ್ನು ಡಿಸಿಸಿ ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಡಾ.ಮೋಹನ ಭಸ್ಮೆ, ತಾಪಂ ಆಡಳಿತಾಧಿಕಾರಿ ಭರತ, ಶಿಕ್ಷಣ ಇಲಾಖೆಯ ಎಸ್ ವಿ ಕುಲಕರ್ಣಿ, ವೈದ್ಯಾಧಿಕಾರಿ ಡಾ.ಎಮ್ ಎಸ್ ಕೊಪ್ಪದ, ಮುಖ್ಯವೈದ್ಯಾಧಿಕಾರಿ ಡಾ.ವೃಷಬೇಂದ್ರ ಹಿರೇಮಠ, ಎ ಬಿ ಮಲಬನ್ನವರ, ಪ್ರಮೀಳಾ ಬೇವಿನಗಿಡದ, ಡಾ.ಮೋಹನ ಕಮತ, ಎಮ್ ಎಲ್ ಜನ್ಮಟ್ಟಿ, ಎ ಬಿ ಕುಡುವಕ್ಕಲೀಗ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ, ಪ್ರಕಾಶ ವರದಾಯಿ, ಲಯನ್ಸ್ ಸಂಸ್ಥೆಯ ಶಂಕರ ದೊಡಮನಿ ಇದ್ದರು.
