RNI NO. KARKAN/2006/27779|Thursday, October 1, 2026
You are here: Home » breaking news » ಗೋಕಾಕ:ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಶ್ರಮಿಸುವದೆ ಸಂಘದ ಉದ್ಧೇಶವಾಗಿದೆ : ಕುಪೇಂದ್ರ ಆಯನೂರ

ಗೋಕಾಕ:ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಶ್ರಮಿಸುವದೆ ಸಂಘದ ಉದ್ಧೇಶವಾಗಿದೆ : ಕುಪೇಂದ್ರ ಆಯನೂರ 

ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಶ್ರಮಿಸುವದೆ ಸಂಘದ ಉದ್ಧೇಶವಾಗಿದೆ : ಕುಪೇಂದ್ರ ಆಯನೂರ

ಗೋಕಾಕ ಆ 16 : ಶ್ರಮ ಜೀವಿಗಳಾದ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸರಕಾರಿ ಸೌಲಭ್ಯದೊಂದಿಗೆ ಅವರ ಕ್ಷೇಮಾಭಿವೃದ್ಧಿಗೆ ಶ್ರಮಿಸುವದೆ ಸಂಘದ ಉದ್ಧೇಶವಾಗಿದೆ ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಕುಪೇಂದ್ರ ಆಯನೂರ ಹೇಳಿದರು.
ಅವರು, ರವಿವಾರದಂದು ನಗರದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ಮೂಲಭೂತ ಸೌಲಭ್ಯದಿಂದ ವಂಚಿತರಾದ ಅಸಂಘಟಿತ ಕಾರ್ಮಿಕರನ್ನು ಜಾಗೃತಗೊಳಿಸಿ ಅವರ ನೆಮ್ಮದಿಯ ಜೀವನಕ್ಕಾಗಿ ಸಂಘ ಶ್ರಮಿಸುತ್ತಿದೆ. ಸಮಾಜವನ್ನು ಮುನ್ನಡೆಸುವ ಈ ಕಾರ್ಮಿಕರ ಪರಿಶ್ರಮ, ಬಲಿದಾನದಿಂದ ಕಾಮಗಾರಿಗಳ ನಿರ್ಮಾಣವಾಗುತ್ತಿವೆ. ಇವರ ರಕ್ಷಣೆಗಾಗಿ ನಾವೆಲ್ಲ ಶ್ರಮಿಸೋಣವೆಂದರು.
ಸಮಾರಂಭವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ವೇದಿಕೆ ಮೇಲೆ ರಾಜ್ಯಾಧ್ಯಕ್ಷ ಪ್ರದೀಪ ಹೊನ್ನಪ್ಪ, ಕಾರ್ಯಾಧ್ಯಕ್ಷ ರತ್ನಮಾಲಾ ಮುಳೆ, ಜಿಲ್ಲಾಧ್ಯಕ್ಷ ರಜನಿಕಂತ ಮಾಳೋದೆ, ಪ್ರಧಾನ ಕಾರ್ಯದರ್ಶಿ ರಮಾಕಾಂತ ಕೋಸಂದಲ, ತಹಶೀಲದಾರ ಡಾ.ಮೋಹನ ಭಸ್ಮೆ, ಪೌರಾಯುಕ್ತ ರವಿ ರಂಗಸುಭೆ ಇದ್ದರು.

Related posts: