RNI NO. KARKAN/2006/27779|Thursday, October 1, 2026
You are here: Home » breaking news » ಗೋಕಾಕ:ಮುಖ್ಯಮಂತ್ರಿ ವಿಡಿಯೋ ಸಂವಾದ : ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗಿ

ಗೋಕಾಕ:ಮುಖ್ಯಮಂತ್ರಿ ವಿಡಿಯೋ ಸಂವಾದ : ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗಿ 

ಮುಖ್ಯಮಂತ್ರಿ ವಿಡಿಯೋ ಸಂವಾದ : ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗಿ

ಗೋಕಾಕ ಆ 11 : ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಹಾಗೂ ತಹಶೀಲ್ದಾರರೊಂದಿಗೆ ಮಂಗಳವಾರದಂದು ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಡಿ.ಕೆ‌.ಶಿವುಕುಮಾರ, ಮಳೆಯಿಂದ ಆಗುತ್ತಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿ ಕೈಗೊಳ್ಳಲಾಗಿರುವ ಪರಿಹಾರ ಕ್ರಮಗಳ ಕುರಿತು ಚರ್ಚಿಸಿದರು.
ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಆಳವಡಿಸಿದ್ದ ಬೃಹತ್ ಎಲ್.ಇ.ಡಿ ಸ್ಕ್ರೀನ್ ನಲ್ಲಿ ಮುಖ್ಯಮಂತ್ರಿ ಡಿ.ಕೆ .ಶಿವುಕುಮಾರ್ ನೀಡಿದ ನಿರ್ದೇಶನಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಪೌರಾಯುಕ್ತ ರವಿ ರಂಗಸುಭೆ, ಬಿಇಒ ಜಿ.ಬಿ.ಬಳಗಾರ, ಹೆಸ್ಕಾಂ ಎಇಇ ಎಸ್.ಪಿ. ವರಾಳೆ, ವಲಯ ಅರಣ್ಯಾಧಿಕಾರಿ ಆನಂದ ಹೆಗಡೆ, ಪಿಎಸ್ಐಗಳಾದ ಕಿರಣ ಮೋಹಿತೆ, ಕೆ.ವಾಲಿಕರ, ಮುಖ್ಯಾಧಿಕಾರಿ ಎಸ್.ಎಂ. ಹಿರೇಮಠ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: