ಗೋಕಾಕ:ಬುದ್ಧಿ ಬ್ರಮಣೆಯಿಂದ ಬಳಲುತ್ತಿದ್ದ ಯುವಕ ಕಾಣೆ : ಗೋಕಾದಲ್ಲಿ ಘಟನೆ
ಬುದ್ಧಿ ಬ್ರಮಣೆಯಿಂದ ಬಳಲುತ್ತಿದ್ದ ಯುವಕ ಕಾಣೆ : ಗೋಕಾದಲ್ಲಿ ಘಟನೆ
ಗೋಕಾಕ ನ 29: ಬುದ್ಧಿ ಬ್ರಮಣೆಯಿಂದ ಬಳಲುತ್ತಿರುವನೋರ್ವ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿ ಕಾಣೆಯಾದ ಬಗ್ಗೆ ಇಲ್ಲಿಯ ಆದಿತ್ಯ ನಗರದಲ್ಲಿ ನಡೆದಿದೆ.
ಗೋಕಾಕನ ಆದಿತ್ಯ ನಗರದ ನಿವಾಸಿ ಕಿರಣ ಸಿದ್ದಪ್ಪ ಕಂಕಣವಾಡಿ (37) ಈತನು ಕಳೆದ ದಿ. 01 ರಂದು ಸಾಯಂಕಾಲ ಮನೆಯಿಂದ ಯಾರಿಗೂ ಹೇಳದೇ ಹೋಗಿರುತ್ತಾನೆ ಎಂದು ಕಾಣೆಯಾದವನ ತಂದೆ ಸಿದ್ದಪ್ಪ ಭೀಮಪ್ಪಾ ಕಂಕಣವಾಡಿ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬುದ್ಧಿ ಬ್ರಮಣೆಯಿಂದ ಮಾನಸಿಕ ಅಸ್ವಸ್ತತೆಯಿಂದ ಬಳಲುತ್ತಿರುವ ಕಾಣೆಯಾದವನು 5 ಫೂಟ್ 5 ಇಂಚ್ ಎತ್ತರವಿದ್ದು, ಗೋದಿಗೆಂಪು ಬಣ್ಣ, ಮೈಯಿಂದ ತೆಳ್ಳಗೆ ದುಂಡುಮುಖ ಹೊಂದಿದ್ದಾನೆ. ಮೈಮೇಲೆ ಕಂದು ಬಣ್ಣದ ಭುಶರ್ಟ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ.
ಬುದ್ಧಿ ಬ್ರಮಣೆಯಿಂದ ಮಾನಸಿಕ ಅಸ್ವಸ್ತತೆಯಿಂದ ಬಳಲುತ್ತಿರುವ ಕಾಣೆಯಾದವನ ಬಗ್ಗೆ ಯಾರಿಗಾದರೂ ಏನಾದರೂ ಮಾಹಿತಿಯಿದ್ದರೆ ಗೋಕಾಕ ಶಹರ ಪೊಲೀಸ್ ಠಾಣೆ ಸಂಪರ್ಕ ಸಂಖ್ಯೆ – 08332- 225033 ಅಥವಾ ಬೆಳಗಾವಿ ಪೊಲೀಸ್ ಕಂಟ್ರೋಲ್ ರೂಮ್ ಸಂಪರ್ಕ ಸಂಖ್ಯೆ 0831-2405255 ಗೆ ತಿಳಿಸಿಲು ಪ್ರಕಟನೆಯಲ್ಲಿ ಕೋರಲಾಗಿದೆ.