RNI NO. KARKAN/2006/27779|Friday, October 25, 2024
You are here: Home » breaking news » ಗೋಕಾಕ:ಕಸಾಪ ಕಣಕ್ಕೆ ಕನ್ನಡ ಪರ ಹೋರಾಟಗಾರ ಖಾನಪ್ಪನವರ ಜಿಲ್ಲೆಯಾದ್ಯಂತ ಭಾರಿ ಬೆಂಬಲ

ಗೋಕಾಕ:ಕಸಾಪ ಕಣಕ್ಕೆ ಕನ್ನಡ ಪರ ಹೋರಾಟಗಾರ ಖಾನಪ್ಪನವರ ಜಿಲ್ಲೆಯಾದ್ಯಂತ ಭಾರಿ ಬೆಂಬಲ 

ಕಸಾಪ ಕಣಕ್ಕೆ ಕನ್ನಡ ಪರ ಹೋರಾಟಗಾರ ಖಾನಪ್ಪನವರ
ಜಿಲ್ಲೆಯಾದ್ಯಂತ ಭಾರಿ ಬೆಂಬಲ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 19 :

 

ಕಳೆದ 16 ವರ್ಷಗಳಿಂದ ಕನ್ನಡ ನಾಡು,ನುಡಿ, ನೆಲ, ಜಲದ ವಿಷಯ ಬಂದಾಗ ಮುಂಚೂಣಿಯಲ್ಲಿದ್ದು, ಹೋರಾಟ ಮಾಡಿ ಕನ್ನಡವನ್ನು ಕಟ್ಟಿ ಬೆಳೆಸುತ್ತಿರುವ ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನವರ ಬೆಳಗಾವಿ ಜಿಲ್ಲಾ ಕಸಾಪ ಕಣದಲ್ಲಿರುವದು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಹಾಗೂ ಕಸಾಪ ಮತದಾರರಲ್ಲಿ ಸಂತೋಷವನ್ನುಂಟು ಮಾಡಿದೆ.

ಇದೇ ಭಾನುವಾರ ಜರುಗಲಿರುವ ಕಸಾಪ ಚುನಾವಣೆಯನ್ನು ಎದುರಿಸಲು ಈಗಾಗಲೇ ಬಸವರಾಜ ಖಾನಪ್ಪನವರ ಅವರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡದ ತೇರನ್ನು ಎಳೆಯಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಹೋದಲ್ಲೆಲ್ಲ ಕಸಾಪ ಮತದಾರರು ಈ ಬಾರಿ ಬದಲಾವಣೆ ಮಾಡುವ ಭರವಸೆಯನ್ನು ನೀಡಿ ಬಸವರಾಜ ಖಾನಪ್ಪನವರ ಅವರಿಗೆ ಆರ್ಶಿವಾದ ಮಾಡಿದ್ದಾರೆ. ಜಿಲ್ಲೆಯ ಬಹುತೇಕ ಮಠಾಧೀಶರು ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನವರ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಅವರು ಭಕ್ತಾದಿಗಳಿಗೆ ಬಸವರಾಜ ಖಾನಪ್ಪನವರ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಬರುವ ಅವಧಿಗೆ ಬೆಳಗಾವಿ ಜಿಲ್ಲೆಯಲ್ಲಿ ಕಸಾಪವನ್ನು ನಿಜವಾದ ಸಾಹಿತಿಗಳ ಕಡೆಗೆ ಕರದೊಯುವ ಸಂಕಲ್ಪವನ್ನು ಅಭ್ಯರ್ಥಿ ಬಸವರಾಜ ಖಾನಪ್ಪನವರ ಮಾಡಿದ್ದಾರೆ. ಈಗಾಗಲೇ ಅವರ ಚುನಾವಣೆ ಪ್ರಣಾಳಿಕೆ ಎಲ್ಲ ಕಡೆ ಸದ್ದು ಮಾಡುತ್ತಿದೆ.
” ಕಸಾಪ ನಡಿಗೆ ನಿಜವಾದ ಸಾಹಿತಿಗಳ ಕಡೆಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕಣಕ್ಕೆ ಇಳಿದಿರುವ ಖಾನಪ್ಪನವರ

ಜಿಲ್ಲೆಯಾದ್ಯಂತ ಗ್ರಾಮಗಳಲ್ಲಿರುವ ಗ್ರಾಮ ಘಟಕಗಳ ಸಹಯೋಗದೊಂದಿಗೆ ಕಸಾಪ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳವದು. ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ತ್ರೈಮಾಸಿಕ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಭಾಷಾಭಿಮಾನ ಬಿತ್ತುವು ದಿಸೆಯಲ್ಲಿ ಬೀದಿ ನಾಟಕಗಳನ್ನು ಸಂಘಟಿಸುವುದು. ಯುವ ಸಾಹಿತಿಗಳನ್ನು ನಾಡಿಗೆ ಪರಿಚಯಿಸುವ ಸದುದ್ದೇಶದಿಂದ ತಾಲೂಕಾ ಮಟ್ಟದಲ್ಲಿ ಕವಿಗೋಷ್ಠಿ , ಚಿಂತನಗೋಷ್ಠಿ ಹಾಗೂ ಸಂವಾದಗಳನ್ನು ಸಂಘಟಿಸುವುದು. ಯುವ ಸಾಹಿತಿಗಳು ರಚಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲು ವೇದಿಕೆ ಕಲ್ಪಿಸಿಕೊಟ್ಟು , ಅವರ ಕೃತಿಗಳಗಳಿಗೆ ಆರ್ಥಿಕ ಸಹಾಯ ಮಾಡುವುದು. ಹೊರ ನಾಡ ಕನ್ನಡಿಗರನ್ನು ಒಂದುಗೂಡಿಸಿ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಲು ಪಕ್ಕದ ಗೋವಾ ರಾಜ್ಯದ ಕನ್ನಡಿಗರೊಂದಿಗೆ ಕನ್ನಡ ಭಾಷೆಯನ್ನು ಉಳಿಸಲು ಕಾರ್ಯಕ್ರಮಗಳನ್ನು ಸಂಘಟಿಸುವುದು. ಹೊರ ರಾಜ್ಯದ ಮಕ್ಕಳಲ್ಲಿ ಭಾಷಾಭಿಮಾನ ಬೆಳಸುವ ನಿಟ್ಟಿನಲ್ಲಿ ಭಾಷಣ ಸ್ವರ್ಧೆ, ಗಾಯನ , ಜಾನಪದ ಗಾಯನ ಸ್ವರ್ಧೆ , ನಿಬಂಧ ಸ್ವರ್ಧೆಗಳನ್ನು ಏರ್ಪಡಿಸುವುದು. ಅಲಕ್ಷಿತ ಮತ್ತು ನಿಜವಾದ ಸಾಹಿತಿಗಳನ್ನು , ಬರಹಗಾರರನ್ನು ,ಕವಿಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವದು. ತಾಲೂಕಾ ಮಟ್ಟದಲ್ಲಿ ನಿಜವಾದ ಸಾಹಿತಿ ಮತ್ತು ಕನ್ನಡಪರ ಹೋರಾಟಗಾರನ್ನು ಮುಖ್ಯ ವಾಹಿನಿಗೆ ತರುವ ಮಹತ್ತರ ಉದ್ಧೇಶದಿಂದ ಬರುವ ಕಸಾಪ ರಾಜ್ಯ ಹಾಗೂ ಜಿಲ್ಲಾ ಚುನಾವಣೆಯ ಜೊತೆಗೆ ಪ್ರತಿ ತಾಲೂಕಾ ಮಟ್ಟದಲ್ಲಿಯೂ ಚುನಾವಣೆಯನ್ನು ನಡೆಸುವಂತೆ ಕಸಾಪ ಕೇಂದ್ರ ಬಾಯಲಾದಲ್ಲಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬೆಳಗಾವಿ ಗಡಿಬಾಗ ಸೇರಿದಂತೆ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಲು ಜಿಲ್ಲಾಡಳಿತ ಮತ್ತು ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಗಳ ಮೇಲೆ ಒತ್ತಾಯ ಹೇರಿ ನಿವೇಶನ ಪಡೆದು ಸಾಹಿತ್ಯ ಭವನಗಳನ್ನು ನಿರ್ಮಿಸುವುದು. ಡಾ.ಸರೋಜಿನಿ ಮಹಿಷಿ ವರದಿಯ ಜಾರಿಗೆ ವಿಶೇಷ ಗಮನ ನೀಡುವುದು. ಕನ್ನಡದ ಪ್ರಮುಖ ವಿದ್ವಾಂಸರನ್ನು ಪರಿಷತ್ತಿನ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು. ಜನಪದ ಸಾಹಿತ್ಯ ಹಾಗೂ ಕಲೆಯ ಪ್ರದರ್ಶನಗಳಿಗೆ ವಿಶೇಷ ಆದ್ಯತೆ ನೀಡುವ ಚಟುವಟಿಕೆಗಳನ್ನು ಆಯೋಜಿಸುವುದು ಸೇರಿದಂತೆ ಹಲವಾರು ಯೋಚನೆ ಮತ್ತು ಯೋಜನೆಗಳೊಂದಿಗೆ ಕಸಾಪ ಚುನಾವಣೆಗೆ ಸ್ವರ್ಧೆಮಾಡಿದ್ದು, ಬೆಳಗಾವಿ ಜಿಲ್ಲೆಯ ಎಲ್ಲ ಕಸಾಪ ಅಜೀವ ಸದಸ್ಯವನ್ನು ಪಡೆದ ಮತದಾರ ಪ್ರಭುಗಳಾದ ಕನ್ನಡ ಮನಸ್ಸುಗಳೇ ನನ್ನನ್ನು ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.

” ಬೆಳಗಾವಿ ಇತಿಹಾಸದಲ್ಲಿಯೇ ಕಸಾಪ ಚುನಾವಣೆಗೆ ಈ ಬಾರಿ ಒಬ್ಬ ಕನ್ನಡ ಪರ ಹೋರಾಟಗಾರ ಚುನಾವಣೆಗೆ ಸ್ವರ್ಧಿಸಿದ್ದಾರೆ. ಕಳೆದ 16 ವರ್ಷಗಳಿಂದ ಕನ್ನಡವೇ ತಮ್ಮ ಜೀವನವೆಂಬ ಸಂಕಲ್ಪದೊಂದಿಗೆ ಕನ್ನಡ ತಾಯಿಯ ಸೇವೆ ಗೈಯುತ್ತಿರುವ ಬಸವರಾಜ ಖಾನಪ್ಪನವರ ಅವರಿಗೆ ಈ ಬಾರಿ ಕಸಾಪ ಸದಸ್ಯರು ಗೆಲ್ಲಿಸಿ ಕನ್ನಡದ ತೇರು ಎಳೆಯಲು ಅವಕಾಶ ಕಲ್ಪಿಸಬೇಕು”.
ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶೂನ್ಯ ಸಂಪಾದನಠ .ಗೋಕಾಕ.

” ಹತ್ತಾರು ವರ್ಷಗಳಿಂದ ಮುಂಚೂಣಿಯಲ್ಲಿದ್ದು ಕನ್ನಡಕ್ಕೆ ಕುತ್ತು ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತಿರುವ ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನವರ ಅವರು ಈ ಬಾರಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಂತಿದ್ದಾರೆ. ಜಾತ್ಯಾತೀತವಾಗಿ ಎಲ್ಲಾ ಕಸಾಪ ಮತದಾರರು ಅವರಿಗೆ ಬೆಂಬಲ ವ್ಯಕ್ತಪಡಿಸಿ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ. ಆ ನಿಟ್ಟಿನಲ್ಲಿ ಭಾನುವಾರದಂದು ಜರುಗುವ ಚುನಾವಣೆಯಲ್ಲಿ ಎಲ್ಲರೂ ಖಾನಪ್ಪನವರ ಅವರಿಗೆ ಮತ ನೀಡಿ ಆರ್ಶಿವಧಿಸಬೇಕು.”
ರಮೇಶ ಜಾರಕಿಹೊಳಿ .ಶಾಸಕರು ಗೋಕಾಕ.

Related posts: