ಗೋಕಾಕ:ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 29ರಂದು

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 29ರಂದು
ಗೋಕಾಕ ಫೆ 25 : ಸಾಮಾಜ ಸೇವೆಗಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಮಹಾಂತೇಶ ಕವಟಗಿಮಠ ಅವರ ಹೆಸರಿನಲ್ಲಿ ಸ್ಥಾಪಿತ ‘ಮಹಾಂತೇಶ ಕವಟಗಿಮಠ ಫೌಂಡೇಷನ್’ ವತಿಯಿಂದ ಇದೇ ಗುರುವಾರ ದಿ. 29ರಂದು ಮುಂಜಾನೆ 9 ರಿಂದ ಮಧ್ಯಾಹ್ನ 1ರ ತನಕ ಕೆಎಲ್‍ಇ ಸಂಸ್ಥೆಯ ಇಲ್ಲಿನ ಕೆ.ಎಲ್.ಇ. ಮಹಾದೇವಪ್ಪಣ್ಣಾ ಮುನವಳ್ಳಿ ಶಾಲಾ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಆಯುಷ್ಮಾನ ಭಾರತ ಕಾರ್ಡಿನ ನೋಂದಣಿ ಪ್ರಕ್ರಿಯೆ ಪೂರೈಕೆ ಮತ್ತು ಉಚಿತ ಔಷಧಿಗಳ ವಿತರಣೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.
ಭಾನುವಾರ ಇಲ್ಲಿನ ಕೆ.ಎಲ್.ಇ ಶಾಲಾ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೌಂಡೇಶನ್ ವತಿಯಿಂದ ಈಗಾಗಲೇ ಸವದತ್ತಿ, ರಾಮದುರ್ಗ ಮತ್ತು ಬೆಳಗಾವಿ ಬಳಿಯ ಬೆಳಗುಂದಿ’ಯಲ್ಲಿ ಇಂಥ ಶಿಬಿರಗಳನ್ನು ಎರ್ಪಡಿಸಲಾಗಿತ್ತು ಎಂದು ವಿವರಿಸಿದರು.
ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ಕ್ಯಾನ್ಸರ್ ಮೊದಲಾದ ಮಾರಕ ಕಾಯಿಗಳಿಗೆ ತುತ್ತಾದವರೂ ಉಚಿತ ತಪಾಸಣೆಗೊಳಪಟ್ಟು, ಒಂದು ವೇಳೆ ರೋಗಿ ಬಡವರಾಗಿದ್ದರೆ ಅವರಿಗೆ ಹಳದಿ ಬಣ್ಣದ ಕಾರ್ಡಗಳನ್ನು ನೀಡಿ ಬೆಳಗಾವಿಯ ಕೆಎಲ್‍ಇ ಸಂಸ್ಥೆಯಲ್ಲಿ ಉಚಿತ ಉಪಚಾರಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಉತ್ಕøಷ್ಟ ಅತ್ಯುತ್ತಮ ಗುಣಮಟ್ಟದ ತಜ್ಞರು ಮತ್ತು ಬಹು ಅಂಗಾಂಗ ಜೋಡಣೆಯ ತಜ್ಞ ವೈದ್ಯರೂ ಸೇರಿದಂತೆ 50ಕ್ಕೂ ಅಧಿಕ ತಜ್ಞ ವೈದ್ಯರು ಪಾಲ್ಗೊಂಡು ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ಪಡೆದುಕೊಳ್ಳುವ ರೀತಿಯನ್ನು ವಿವರಿಸಲಿದ್ದಾರೆ ಎಂದು ಹೇಳಿದರು.
ಶಿಬಿರಗಳಲ್ಲಿ ಪಾಲ್ಗೊಂಡು ಆಯುಷ್ಮಾನ ಭಾರತ ಕಾರ್ಡ ನೋಂದಣಿ ಮಾಡಲು ಇಚ್ಛಿಸುವವರು ತಮ್ಮ ಪಡಿತರ ಚೀಟಿ, ಆಧಾರ ಕಾರ್ಡ ಮತ್ತು ಮೋಬೈಲ್ ಸಂಖ್ಯೆ ಇವುಗಳನ್ನು ಜೊತೆಗೆ ಕಡ್ಡಾಯವಾಗಿ ತರುವಂತೆ ಮನವಿ ಮಾಡಿಕೊಂಡರು.
ಕಾಯಿಲೆ ನಮಗಿಲ್ಲ ಎಂದು ಕೊಂಡು ಪ್ರಧಾನ ಮಂತ್ರಿಗಳ ಬಹು ಆಕಾಂಕ್ಷಿ ಯೋಜನೆ ಆಯುಷ್ಮಾನ ಕಾರ್ಡ ನೋಂದಣಿ ಮಾಡಿಸದೇ ಉಳಿದುಕೊಂಡು, ಮುಂದೊಂದು ದಿನ ಆರೋಗ್ಯ ಸಮಸ್ಯೆಗಳಿಗೆ ಈಡಾಗಿ ಆವಾಗ ಯೋಜನೆ ಫಲಾನುಭವಿಗಳಾಗಲು ಇಚ್ಛಿಸುವವರ ಸ್ಥಿತಿ-ಗತಿಯನ್ನು ನಾವು ಎಲ್ಲೆಡೆ ನೋಡುವುದು ಸಾಮಾನ್ಯವಾಗಿ ಪರಿಣಮಿಸಿದೆ. ಹೀಗಾಗಿ, ನಾಗರಿಕರು ಯೋಜನೆಯ ಪ್ರಯೋಜನೆ ಪಡೆಯಲು ಹಿಂದೇಟು ಹಾಕದಂತೆ ಮಹಾಂತೇಶ ಕವಟಗಿಮಠ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನವಳ್ಳಿ, ಮಲ್ಲಿಕಾರ್ಜುನ ಚುನಮರಿ, ಡಾ. ವಣ್ಣೂರ, ರಾಮಣ್ಣ ಹುಕ್ಕೇರಿ, ಸೋಮಶೇಖರ ಮಗದುಮ್ ಮತ್ತಿತರರು ಇದ್ದರು.