RNI NO. KARKAN/2006/27779|Monday, April 13, 2026
You are here: Home » breaking news » ಗೋಕಾಕ:ಕುಟುಂಬದಲ್ಲಿ ಮೊದಲು ಜಾಗೃತರಾಗುವವರೆ ಮಹಿಳೆಯರು : ತಹಶೀಲ್ದಾರ ಡಾ.ಮೋಹನ ಅಭಿಮತ

ಗೋಕಾಕ:ಕುಟುಂಬದಲ್ಲಿ ಮೊದಲು ಜಾಗೃತರಾಗುವವರೆ ಮಹಿಳೆಯರು : ತಹಶೀಲ್ದಾರ ಡಾ.ಮೋಹನ ಅಭಿಮತ 

ಕುಟುಂಬದಲ್ಲಿ ಮೊದಲು ಜಾಗೃತರಾಗುವವರೆ ಮಹಿಳೆಯರು : ತಹಶೀಲ್ದಾರ ಡಾ.ಮೋಹನ ಅಭಿಮತ

ಗೋಕಾಕ ಎ 9 : ಭಾರತೀಯ ಸಂಸ್ಕೃತಿಯಲ್ಲಿ ಪ್ರತಿದಿನ ಮಹಿಳಾ ದಿನಾಚರಣೆಯಾಗಿದ್ದು, ಕುಟುಂಬದಲ್ಲಿ ಮೊದಲು ಜಾಗೃತರಾಗುವವರೆ ಮಹಿಳೆಯರು ಹಾಗಾಗಿ ಮಹಿಳಾ ಶಕ್ತಿ ದೇಶದ ಶಕ್ತಿಯಾಗಿದೆ ಎಂದು ತಹಶೀಲ್ದಾರ ಡಾ. ಮೋಹನ ಭಸ್ಮೆ ಹೇಳಿದರು.

ಗುರುವಾರದಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ದೊಡ್ಡಸ್ಥಾನವಿದೆ. ಹೆಣ್ಣು ಬರಿ ಜೀವವಲ್ಲ, ಜೀವ ತುಂಬುವವರು, ಬಾಳನ್ನು ಬೆಳೆಗುವವರಾಗಿದ್ದಾರೆ. ಮಹಿಳೆ ತ್ಯಾಗದ ಚೈತನ್ಯವಾಗಿದ್ದು, ಬೇರೆಯವವರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಮಹಿಳೆಯರ ಸಾಧನೆಯನ್ನು ಸಮಾಜ ಗೌರವಯುತವಾಗಿ ನೋಡುತ್ತಿದ್ದು, ಇಡೀ ಸಮಾಜಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಾತೃ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಅಂಚಿನಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ, ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ಕಾರ್ಯಕರ್ತೆಯರಿಗೆ ಸತ್ಕರಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಪಂ ಅಧಿಕಾರಿಗಳಾದ ಪರಶುರಾಮ ಗಸ್ತೆ, ನೆರಲೆಕರ, ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ಸಿಡಿಪಿಓಗಳಾದ ಡಿ.ಎಸ್.ಕೂಡವಕ್ಕಲಿಗ, ಯಲಪ್ಪ ಗದಾಡಿ ಉಪಸ್ಥಿತರಿದ್ದರು.

Related posts: