ಬೆಳಗಾವಿ:ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ

ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ
ಬೆಳಗಾವಿ ನ 17 : ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಮಂಡಿಸಿದ ‘ಕರ್ನಾಟಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಒಂದು ಅಧ್ಯಯನ’ ವಿಷಯದ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಪಿಎಚ್.ಡಿ ಪದವಿ ನೀಡಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ನಾಗರಾಜ ಹಳ್ಳಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ.
ರಾಜೇಂದ್ರ ಬಡೇಸಗೋಳ ಅವರು ಪ್ರಸ್ತುತ ಬೆಳಗಾವಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ಹಿರಿಯ ಗುಪ್ತಚರ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
