RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ : ತೆನವನ್ನನ್ ಪ್ರಕಾಶ ಅಭಿಮತ

ಗೋಕಾಕ:ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ : ತೆನವನ್ನನ್ ಪ್ರಕಾಶ ಅಭಿಮತ 

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ : ತೆನವನ್ನನ್ ಪ್ರಕಾಶ ಅಭಿಮತ

ಗೋಕಾಕ ಜು 10 : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಚನೈ ನ ಟಾಟಾ ಕನ್ಸಲ್ಟಂಟ್ ಸರ್ವಿಸಸ್ ಪ್ರಾಜೆಕ್ಟ್ ಇಂಜಿನಿಯರ್ ತೆನವನ್ನನ್ ಪ್ರಕಾಶ ಹೇಳಿದರು .

ಗುರುವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದಲ್ಲಿ ಬಿ.ಸಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಹತ್ತು ದಿನಗಳ ಉದ್ಯೋಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿ ನಲ್ಲಿ ಭಾಷಾ ನೈಪುಣ್ಯತೆ, ಪ್ರಚಲಿತ ವಿದ್ಯಮಾನ ಅರಿವು, ಶಿಸ್ತು ನಡವಳಿಕೆ, ಕೌಶಲ್ಯತೆ ಇರಬೇಕು ಅಂದಾಗ ಯಶಸ್ಸು ಗಳಿಸಲು ಸಾಧ್ಯ ಎಂದು ಸಲಹೆ ನೀಡಿದ ಅವರು ಕಾರ್ಪೋರೇಟ್ ವಲಯದಲ್ಲಿ ಹೇಗೆ ಉದ್ಯೋಗ ಸೃಷ್ಟಿಸಿಕೊಳ್ಳಲು ಯಾವ ರೀತಿ ಭಾಷಾ ನೈಪುಣ್ಯತೆ, ಕೌಶಲ್ಯತೆ ಇರಬೇಕು. ಕಂಪನಿಗಳಲ್ಲಿ ಯಾವ ರೀತಿ ಸಂದರ್ಶನ ಎದುರಿಸಬೇಕು ಎಂದು ಮಾಹಿತಿ ನೀಡಿದರಲ್ಲದೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಅಡಿವೇಶ ಗವಿಮಠ ಮಾತನಾಡಿ ಪಾಲಕರು ತಮ್ಮ ಇಟ್ಟ ಭರವಸೆಗೆ ಚುತಿ ಬಾರದಂತೆ ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಪದವಿಯ ನಂತರ ಉದ್ಯೋಗಹೊಂದಬೇಕು. ಅದಕ್ಕಾಗಿ ಕಾಲೇಜಿನಿಂದ ಒಳ್ಳೆಯ ಉದ್ಯೋಗ ಕೌಶಲ್ಯ ತರಬೇತಿದಾರರನ್ನು ಕರೆಯಿಸಿ 10 ದಿನಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡು ಸಮೃದ್ಧ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಸ್ಕಿಲ್ ಫ್ಯಾಕ್ಟ್
ಕಂಪನಿಯ ಬಿಜನೆಸ್ ಹೆಡ್ ರಾಜೇಶ ಮಂಜುನಾಥ್ , ಅರ್ಪನಾ ಕುಲಕರ್ಣಿ ಉಪಸ್ಥಿತರಿದ್ದರು.

Related posts: